ಕ್ರೈಸ್ಟ್ಚರ್ಚ್: ಇಲ್ಲಿನ ಜೋಡಿ ಮಸೀದಿಯೊಳಗೆ ನುಗ್ಗಿ 50 ಮಂದಿಯನ್ನು ನಿರ್ದಯವಾಗಿ ಗುಂಡಿಕ್ಕಿ ಕೊಂದ ಪ್ರಕರಣ ಸಂಬಂಧ ಬಂಧಿತನಾಗಿರುವ ಆಸ್ಟ್ರೇಲಿಯಾ ಮೂಲದ ಬ್ರೆಂಟನ್ ಟಾರೆಂಟ್ ಸರ್ಕಾರಿ ವಕೀಲರನ್ನು ನಿರಾಕರಿಸಿದ್ದು, ತನ್ನ ಪರ ತಾನೇ ವಾದ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ.
ಲಾಯರ್ ಬೇಡ, ವಾದ ನಾನೇ ಮಾಡ್ತೀನಿ ಅಂದ ಕ್ರೈಸ್ಟ್ಚರ್ಚ್ ಮಸೀದಿ ದಾಳಿಕೋರ - ಆಸ್ಟ್ರೇಲಿಯಾ
ನಾನು ಎಸಗಿದ ಕೃತ್ಯವನ್ನು ನಾನೇ ಸಮರ್ಥಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಅಟಾರ್ನಿ ಜನರಲ್ ರಿಚರ್ಡ್ ಪೀಟರ್ಸ್ ಅವರು ಈ ವಿಷಯ ಖಚಿತಪಡಿಸಿದ್ದು, ಟಾರೆಂಟ್ ಮಾನಸಿಕವಾಗಿ ಸರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಆಸೀಸ್ ಮೂಲದ ಬ್ರೆಂಟನ್ ಪರವಾಗಿ ನ್ಯೂಜಿಲೆಂಡ್ ಸರ್ಕಾರ, ಒಬ್ಬ ವಕೀಲನನ್ನು ನೇಮಕ ಮಾಡಿತ್ತು ಆದರೆ ಅದನ್ನು ನಿರಾಕರಿಸಿರುವ ಆತ, ನನಗೆ ಯಾರ ವಾದದ ಮೇಲೂ ನಂಬಿಕೆಯಿಲ್ಲ. ನಾನು ಎಸಗಿದ ಕೃತ್ಯವನ್ನು ನಾನೇ ಸಮರ್ಥಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ. ಅಟಾರ್ನಿ ಜನರಲ್ ರಿಚರ್ಡ್ ಪೀಟರ್ಸ್ ಅವರು ಈ ವಿಷಯ ಖಚಿತಪಡಿಸಿದ್ದು, ಟಾರೆಂಟ್ ಮಾನಸಿಕವಾಗಿ ಸರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಟಾರೆಂಟ್ ತನ್ನ ವಾದ ತಾನೇ ಮಾಡಿಕೊಳ್ಳುವುದಾಗಿ ಹೇಳಿರುವುದರಿಂದ ಕೋರ್ಟ್ ಹಾಲ್ನಲ್ಲಿ ವಿಚಾರಣೆ ನಡೆಯುವಾಗ ಬಲಪಂಥೀಯ ಕಟ್ಟರ್ ವಾದವನ್ನು ಮುಂದಿಡಲಿದ್ದಾನೆಂಬ ಭೀತಿ ಆವರಿಸಿದೆ.