ಬೀಜಿಂಗ್(ಚೀನಾ): ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿರುವ ರಷ್ಯಾ ವಿರುದ್ಧ ಈಗಾಗಲೇ ಅನೇಕ ದೇಶಗಳು ಕಟುವಾಗಿ ಟೀಕೆ ವ್ಯಕ್ತಪಡಿಸುತ್ತಿದ್ದು ಫ್ರಾನ್ಸ್, ಬ್ರಿಟನ್, ಐರೋಪ್ಯ ಒಕ್ಕೂಟ ಸೇರಿದಂತೆ ಹಲವು ದೇಶಗಳು ಆರ್ಥಿಕ, ರಾಜತಾಂತ್ರಿಕ ಹಾಗು ಸಾಂಸ್ಕೃತಿಕ ನಿರ್ಬಂಧಗಳನ್ನು ವಿಧಿಸುತ್ತಿವೆ.
ರಷ್ಯಾ ಮೇಲೆ ಆರ್ಥಿಕ ಸಮರ ಘೋಷಣೆ ಮಾಡಿರುವ ಇತರೆ ದೇಶಗಳೊಂದಿಗೆ ನಾವು ಸೇರಿಕೊಳ್ಳುವುದಿಲ್ಲ ಎಂದು ಚೀನಾ ಹೇಳಿಕೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಚೀನಾದ ಮುಖ್ಯ ಬ್ಯಾಂಕ್ ನಿಯಂತ್ರಕರು, ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರುವಲ್ಲಿ ಚೀನಾ ಯಾವುದೇ ಕಾರಣಕ್ಕೂ ಯುರೋಪಿಯನ್ ದೇಶಗಳೊಂದಿಗೆ ಸೇರಿಕೊಳ್ಳುವುದಿಲ್ಲ ಎಂದು ತಿಳಿಸಿದೆ.
ರಷ್ಯಾದಲ್ಲಿ ಉತ್ಪಾದನೆಗೊಳ್ಳುವ ತೈಲ ಮತ್ತು ಅನಿಲ ಖರೀದಿ ಮಾಡುವ ಪ್ರಮುಖ ರಾಷ್ಟ್ರಗಳಲ್ಲಿ ಚೀನಾ ಕೂಡ ಒಂದಾಗಿದ್ದು, ಉಕ್ರೇನ್ ಮೇಲಿನ ದಾಳಿ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ರಷ್ಯಾ ವಿರುದ್ಧ ನಾವು ಆರ್ಥಿಕ ನಿರ್ಬಂಧ ಹೇರಲು ಸಾಧ್ಯವಿಲ್ಲ. ಎಲ್ಲ ದೇಶಗಳೊಂದಿಗೆ ಸಮನಾದ ಆರ್ಥಿಕ ಸಂಬಂಧ ಇಟ್ಟುಕೊಳ್ಳುವುದಾಗಿ ಸ್ಪಷ್ಟಪಡಿಸಿದೆ.