ಕರ್ನಾಟಕ

karnataka

ನಮಗೂ ಕೋವಿಡ್ ವ್ಯಾಕ್ಸಿನ್ ನೀಡಿ ಎಂದ ಕಾಂಬೋಡಿಯಾ ಪ್ರಧಾನಿ ಹುನ್​ಸೇನ್

By

Published : Jan 19, 2021, 7:11 PM IST

ಕಾಂಬೋಡಿಯಾ ಪ್ರಧಾನಿ ಹುನ್​ಸೇನ್ ಕೋವಿಡ್ ವ್ಯಾಕ್ಸಿನ್ ಪೂರೈಸುವಂತೆ ಭಾರತೀಯ ರಾಯಭಾರಿ ದೇವಯಾನಿ ಉತ್ತಮ್​ಖೋಂಬ್ರಗಡೆಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

vaccine
ಹುನ್​ಸೇನ್

ನೋಮ್ ಪೆನ್: ಕಾಂಬೋಡಿಯಾ ಪ್ರಧಾನಿ ಹುನ್​ಸೇನ್ ಕೋವಿಡ್ ವ್ಯಾಕ್ಸಿನ್ ನೀಡುವಂತೆ ಹೊಸ ಭಾರತೀಯ ರಾಯಭಾರಿ ದೇವಯಾನಿ ಉತ್ತಮ್​ಖೋಂಬ್ರಗಡೆಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇದಕ್ಕೂ ಮೊದಲು ಚೀನಾ ಕಾಂಬೊಡಿಯಾಗೆ ಒಂದು ಮಿಲಿಯನ್ ಡೋಸ್ ಕೋವಿಡ್ ಲಸಿಕೆ ನೀಡಲು ಮುಂದಾಗಿತ್ತು. ಆದರೆ, ಚೀನಾ ವ್ಯಾಕ್ಸಿನ್​ಗೆ WHO ಅನುಮೋದನೆ ನೀಡಲಿಲ್ಲ.

ಜನವರಿ 18 ರ ಹೊತ್ತಿಗೆ, ಕಾಂಬೋಡಿಯಾದಲ್ಲಿ ಒಟ್ಟು 439 ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, 53 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಜನವರಿ 16 ರಂದು ಭಾರತದಲ್ಲಿ ಕೋವಿಡ್ ವ್ಯಾಕ್ಸಿನೇಷನ್​ಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಜಗತ್ತಿನ ಅತಿದೊಡ್ಡ ವ್ಯಾಕ್ಸಿನ್ ಡ್ರೈವ್ ಇದಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವರ್ಷದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯನ್ನು ದೇಶ ಹೊಂದಿದೆ.

ABOUT THE AUTHOR

...view details