ಲಂಡನ್ (ಯು.ಕೆ):32 ವರ್ಷದ ಬ್ರಿಟಿಷ್ ಸಿಖ್ ಆರ್ಮಿ ಅಧಿಕಾರಿ ಮತ್ತು ಫಿಸಿಯೋಥೆರಪಿಸ್ಟ್ ದಕ್ಷಿಣ ಧ್ರುವಕ್ಕೆ ಯಾರ ಬೆಂಬೆಲವಿಲ್ಲದೆಯೇ ಚಾರಣ ಪೂರ್ಣಗೊಳಿಸುವ ದಾಖಲೆ ಬರೆಯಲು ಮುಂದಾಗಿದ್ದಾರೆ. ಈ ಮೂಲಕ ಸಾಧನೆ ಮಾಡಿದ ಭಾರತ ಮೂಲದ ಮೊದಲ ಮಹಿಳೆ ಎಂಬ ಕೀರ್ತಿಗಳಿಸಲು ಸಿದ್ಧರಾಗಿದ್ದಾರೆ. ಹೀಗಾಗಿ ಚಿಲಿಗೆ ಪ್ರಯಾಣ ಬೆಳೆಸಿದ್ದಾರೆ.
ಪೋಲಾರ್ ಪ್ರೀತ್ ಎಂದೇ ಖ್ಯಾತಿ ಪಡೆದಿರುವ ಕ್ಯಾಪ್ಟನ್ ಹರ್‌ಪ್ರೀತ್ ಚಾಂಡಿ, ಮೈನಸ್ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ಮತ್ತು ಗಂಟೆಗೆ 60 ಮೀಟರ್ನಷ್ಟು ವೇಗದ ಗಾಳಿ ಜೊತೆ ಸುಮಾರು 700 ಮೈಲಿ ದೂರ ಕ್ರಮಿಸಲು ಸಜ್ಜಾಗಿದ್ದಾರೆ.
ಈ ಪ್ರಯಾಣವು ಸುಮಾರು 45-47 ದಿನಗಳನ್ನು ತೆಗೆದುಕೊಳ್ಳಲಿದೆ. ಹೀಗಾಗಿ ಈ ಪ್ರಯಾಣದಲ್ಲಿ ಹಲವರನ್ನ ನನ್ನೊಂದಿಗೆ ಕರೆದೊಯ್ಯಲು ಬಯಸಿದ್ದೇನೆ. ಇದಕ್ಕಾಗಿ ಲೈವ್ ಮ್ಯಾಪಿಂಗ್ ಸೌಲಭ್ಯವನ್ನು ನನ್ನ ಬ್ಲಾಗರ್ನಲ್ಲಿ ನೀಡಿದ್ದೇನೆ. ಇದರಿಂದ ನೀವು ನನ್ನನ್ನು ಪ್ರಯಾಣದುದ್ದಕ್ಕೂ ಹಿಂಬಾಲಿಸಹುದು ಎಂದು ಹರ್‌ಪ್ರೀತ್ ತಮ್ಮ ಬ್ಲಾಗರ್ನಲ್ಲಿ ಬರೆದುಕೊಂಡಿದ್ದಾರೆ.