ಕರ್ನಾಟಕ

karnataka

ETV Bharat / international

ಕೊರೊನಾ ಹಾವಳಿಗೆ ನಗರಗಳು ಸ್ತಬ್ಧ: ವಿಶ್ವಾದ್ಯಂತ​ ಮಾಲಿನ್ಯ ಪ್ರಮಾಣದಲ್ಲಿ ಭಾರಿ ಇಳಿಕೆ - ವಾಯುಮಾಲಿನ್ಯದ ಪ್ರಮಾಣದಲ್ಲಿ ಗಮನಾರ್ಹ ಇಳಿಕೆ

ಕೋವಿಡ್​-19(Corona Virus Disease) ಹಿನ್ನೆಲೆಯಿಂದ ಜನಜೀವನದ ದಿನಚರಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ದೇಶ ಮಾತ್ರವಲ್ಲ, ಜಗತ್ತಿನಾದ್ಯಂತ ವಾಹನ ಸಂಚಾರ, ಕಾರ್ಖಾನೆ, ಉದ್ದಿಮೆಗಳು ಸ್ಥಗಿತವಾಗಿವೆ. ಇದರಿಂದ ವಾತಾವರಣದಲ್ಲಿ ಸಾರಜನಕ ಸೇರಿದಂತೆ ಇನ್ನಿತರ ಮಾಲಿನ್ಯಕಾರಗಳ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.

As virus shuts down cities, pollution drops
ಕೊರೊನಾ ನಗರಗಳನ್ನು ಲಾಕ್​ಡೌನ್​ ಮಾಡಿಸಿದಂತೆ ಮಾಲಿನ್ಯ ಪ್ರಮಾಣದಲ್ಲಿ ಭಾರೀ ಇಳಿಕೆ

By

Published : Mar 27, 2020, 8:02 AM IST

ಕೊರೊನಾ ವೈರಸ್ ಹಾವಳಿಯಿಂದ ಜಗದಗಲ ನಗರಗಳಲ್ಲಿ ನೀರವ ಮೌನ ಆವರಿಸುತ್ತಿದೆ. ಸಹಜವಾಗಿಯೇ ವಾಯುಮಾಲಿನ್ಯ, ಶಬ್ಧಮಾಲಿನ್ಯದ ಪ್ರಮಾಣದಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದೆ.

ಕೋವಿಡ್​-19 ವ್ಯಾಪಿಸುತ್ತಿರುವ ಪರಿಣಾಮ ಜನಜೀವನದ ದಿನಚರಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಕಾರ್ಖಾನೆ, ಉದ್ದಿಮೆಗಳು ಬಾಗಿಲು ಹಾಕಿವೆ. ಇದರಿಂದ ವಾತಾವರಣದಲ್ಲಿ ಸಹಜವಾಗಿಯೇ ಸಾರಜನಕ ಡೈಆಕ್ಸೈಡ್‌ ಪ್ರಮಾಣ ಹಾಗು ಇನ್ನಿತರ ಮಾಲಿನ್ಯಕಾರಕಗಳು ಇಳಿಕೆಯಾಗಿವೆ.

ಈ ಸಂಬಂಧ ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ (ಇಎಸ್‌ಎ) ಸೆಂಟಿನೆಲ್ -5 ಪಿ ಭೂ-ವೀಕ್ಷಣಾ ಉಪಗ್ರಹವು ಒಂದು ಚಿತ್ರವನ್ನೂ ಸಹ ಸೆರೆಹಿಡಿದು ಭೂಮಿಗೆ ಕಳುಹಿಸಿದೆ. ಈ ಚಿತ್ರವನ್ನು ವಿಜ್ಞಾನಿಗಳು ವಿಶ್ಲೇಷಿಸಿದ್ದು ವಾತಾವರಣದಲ್ಲಿ ಮಾಲಿನ್ಯ ಕಡಿಮೆಯಾಗಿದ್ದು ಗೋಚರಿಸಿದೆ. ಈ ಇಳಿಕೆಗೆ ಕೊರೊನಾ ಹಾವಳಿ ಮುಖ್ಯ ಕಾರಣ. ಹಾಗಂತ, ಇದೊಂದೇ ಕಾರಣವಲ್ಲ. ಸಾಮಾನ್ಯವಾಗಿ ಹವಾಮಾನ ಪರಿಸ್ಥಿತಿಯಲ್ಲಿನ ಏರುಪೇರು ಕೂಡಾ NO2ನಲ್ಲಿನ ಇಳಿಕೆಗೆ ಕಾರಣವಾಗಿದೆ ಅಂತ ವಿಜ್ಞಾನಿಗಳು ಹೇಳುತ್ತಾರೆ.

ABOUT THE AUTHOR

...view details