ಬಾಲ್ಖ್ (ಅಫ್ಘಾನಿಸ್ತಾನ):ಅಫ್ಘಾನಿಸ್ತಾನದ ಬಾಲ್ಕ್ ಪ್ರಾಂತ್ಯದ ಚೊಮ್ತಾಲ್ ಜಿಲ್ಲೆಯಲ್ಲಿ ಶುಕ್ರವಾರ ವೈಮಾನಿಕ ದಾಳಿ ನಡೆಸಲಾಗಿದ್ದು ಘಟನೆಯಲ್ಲಿ ಏಳು ತಾಲಿಬಾನ್ ಭಯೋತ್ಪಾದಕರು ಹತರಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲವು ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು ದಾಳಿ ವೇಳೆ ಸಂಗ್ರಹ ಮಾಡಿಟ್ಟುಕೊಂಡಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಸಹ ನಾಶವಾಗಿದೆ ಎಂದು ತಿಳಿಸಿದೆ.
ಬಾಲ್ಕ್ ಪ್ರಾಂತ್ಯದ ಚೊಮ್ಟಾಲ್ ಜಿಲ್ಲೆಯಲ್ಲಿ ಬೆಳಗ್ಗೆ ವೈಮಾನಿಕ ದಾಳಿಯ ನಡೆಸಲಾಗಿದ್ದು ದಾಳಿಯಲ್ಲಿ 7 ತಾಲಿಬಾನ್ ಜನರು ಹತರಾಗಿದ್ದರೆ, ಐವರು ಗಾಯಗೊಂಡಿದ್ದಾರೆ. ಅಲ್ಲದೇ ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ನಾಶಪಡಿಸಲಾಗಿದೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದೆ.
ಫರಾಹ್ ಪ್ರಾಂತ್ಯದ ಬಾಲಾ ಬೊಲೊಕ್ ಜಿಲ್ಲೆಯಲ್ಲಿ ಇತರೆ ಎಂಟು ತಾಲಿಬಾನ್ ಭಯೋತ್ಪಾದಕರ ಹತ್ಯೆಯ ಬಗ್ಗೆಯೂ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಬಾಲಾ ಬೊಲೊಕ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 8 ತಾಲಿಬಾನ್ ಭಯೋತ್ಪಾದಕರು ಮೃತಪಟ್ಟರೆ 3 ಗಾಯಗೊಂಡಿದ್ದಾರೆ. ಪರಸ್ಪರ ದಾಳಿ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ನಾಶವಾಗಿವೆ ಎಂದು ರಕ್ಷಣಾ ಸಚಿವಾಲಯುವು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದೆ.