ಜಕಾರ್ತಾ :ಇಂಡೋನೆಷ್ಯಾದಲ್ಲಿ ತೀವ್ರ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಆದರೆ, ಲಭ್ಯವಾಗಿರುವ ಮಾಹಿತಿ ಪ್ರಕಾರ ಯಾವುದೇ ಹಾನಿ, ಸಾವು - ನೋವು ಸಂಭವಿಸಿರುವ ಬಗ್ಗೆ ವರದಿ ಲಭ್ಯವಾಗಿಲ್ಲ.
ಭೂಕಂಪದ ತೀವ್ರತೆ ನಿಯಾಸ್ ಬರಾಟ್ ಜಿಲ್ಲೆಯಲ್ಲಿ ಕಂಡು ಬಂದಿದ್ದು, ಸುನಾಮಿಯಿಂದ ಸಂಭವಿಸಿರುವ ಭೂಕಂಪ ಇದಲ್ಲ ಎಂದು ಹವಾಮಾನ ಮತ್ತು ಭೌತಶಾಸ್ತ್ರ ಸಂಸ್ಥೆ ತಿಳಿಸಿದೆ. ಇಂದು ಬೆಳಗ್ಗೆ 6:58 ಕ್ಕೆ ಭೂಕಂಪನವು ನಿಯಾಸ್ ದ್ವೀಪದ ನೈರುತ್ಯ ದಿಕ್ಕಿನಲ್ಲಿ ಸಂಭವಿಸಿದೆ ಎಂದು ಅಲ್ಲಿನ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದರಿಂದ ಹಾವುದೇ ಹಾನಿ-ಸಾವುನೋವು ಸಂಭವಿಸಿರುವ ವರದಿಯಾಗಿಲ್ಲ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.