ಕರ್ನಾಟಕ

karnataka

ETV Bharat / international

ನಮ್ಮ ಸೇನೆಯಿಂದ ರಷ್ಯಾದ 11,000 ಯೋಧರ ಹತ್ಯೆ: ಉಕ್ರೇನ್

ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ಆರಂಭಗೊಂಡು 12 ದಿನ ಕಳೆಯುತ್ತಾ ಬಂತು. ಭೀಕರ ರಣಕಾಳಗದಲ್ಲಿ ಎರಡು ದೇಶದ ಸಾವಿರಾರು ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

Ukraine Ministry of Foreign Affairs
Ukraine Ministry of Foreign Affairs

By

Published : Mar 7, 2022, 5:01 PM IST

ಕೀವ್‌(ಉಕ್ರೇನ್‌): ನಮ್ಮ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿದಾಗಿನಿಂದಲೂ 11 ಸಾವಿರ ಯೋಧರನ್ನ ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್​ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಉಕ್ರೇನ್​ ವಿದೇಶಾಂಗ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, 999 ಶಸ್ತ್ರಸಜ್ಜಿತ ವಾಹನ, 46 ಏರ್​ಕ್ರಾಫ್ಟ್​, 68 ಹೆಲಿಕಾಪ್ಟರ್​, 290 ಯುದ್ಧ ಟ್ಯಾಂಕರ್​, 117 ಫಿರಂಗಿ ತುಣುಕು, 50 MLRಗಳನ್ನು ಹೊಡೆದುರುಳಿಸಲಾಗಿದೆ. ಇದರ ಜೊತೆಗೆ 60 ಸಿಸ್ಟರ್ನ್​​, 454 ವಾಹನ, 3 ಹಡಗು ಮತ್ತು 23 ಯುದ್ಧ ವಿಮಾನ ನಾಶ ಮಾಡಲಾಗಿದೆ ಎಂಬ ಮಾಹಿತಿ ಹಂಚಿಕೊಂಡಿದೆ. ಇದರ ಜೊತೆಗೆ 11 ಸಾವಿರ ಯೋಧರನ್ನು ಹೊಡೆದುರುಳಿಸಲಾಗಿದೆಯಂತೆ.

ಇದನ್ನೂ ಓದಿ:ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ಜತೆಗೆ ಪ್ರಧಾನಿ ಮೋದಿ ಮಾತು: 35 ನಿಮಿಷ ಸಮಾಲೋಚನೆ

ಫೆಬ್ರವರಿ 24ರಿಂದಲೂ ಉಕ್ರೇನ್​​-ರಷ್ಯಾ ನಡುವೆ ಯುದ್ಧ ಆರಂಭಗೊಂಡಿದ್ದು, ಈಗಾಗಲೇ 12 ದಿನಗಳು ಕಳೆದುಹೋಗಿವೆ. ಇದರ ಮಧ್ಯೆ ರಷ್ಯಾ ಮಿಲಿಟರಿ ಪಡೆಗೆ ಉಕ್ರೇನ್​​ ಕೂಡ ಸೂಕ್ತ ತಿರುಗೇಟು ನೀಡ್ತಿದ್ದು, ಸೋಲು ಒಪ್ಪಿಕೊಂಡಿಲ್ಲ.

ABOUT THE AUTHOR

...view details