ಕರ್ನಾಟಕ

karnataka

ETV Bharat / international

WHO-ಚೀನಿ ತಜ್ಞರ ಕೊರೊನಾ ವೈರಸ್​ ಮೂಲ ಪತ್ತೆ ವರದಿ ಬಹಿರಂಗ: ಚೀನಾ-ಅಮೆರಿಕ ವಾಕ್ಸಮರ ಶುರು

ಮಂಗಳವಾರ ಸಾರ್ವಜನಿಕವಾಗಿ ಪ್ರಕಟಗೊಳ್ಳುವ ನಿರೀಕ್ಷೆಯಿರುವ ಡಬ್ಲ್ಯುಎಚ್​ಒ- ಚೀನಾ ಅಧ್ಯಯನ ತಂಡದ ವರದಿ, ವೈರಸ್‌ನ ಮೂಲ ಕಂಡುಹಿಡಿಯುವುದರಿಂದ ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ವಿಜ್ಞಾನಿಗಳಿಗೆ ಸಹಾಯವಾಗಬಹುದು. ಆದರೆ ಇದು ಅತ್ಯಂತ ಸೂಕ್ಷ್ಮವಾಗಿದೆ. ವರದಿ ಬಿಡುಗಡೆಯಲ್ಲಿನ ಪುನರಾವರ್ತಿತ ವಿಳಂಬ, ಚೀನಾದ ಕಡೆಯವರು ಅಧ್ಯಯನದ ತೀರ್ಮಾನಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

COVID
COVID

By

Published : Mar 29, 2021, 8:05 PM IST

ಬೀಜಿಂಗ್: ಕೋವಿಡ್​-19 ವೈರಸ್​ ಮೂಲ ಪತ್ತೆಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಹಾಗು ಚೀನಾ ಅಧ್ಯಯನ ತಂಡ ಜಂಟಿ ಪತ್ತೆ ಕಾರ್ಯ ಕೈಗೊಂಡಿದೆ. ಈ ವೈರಸ್ ಪ್ರಾಣಿಗಳ ಮೂಲಕ ಬಾವಲಿಗಳಿಂದ ಮನುಷ್ಯರಿಗೆ ಹರಡುವುದು ಸಾಧ್ಯವಿದೆ. ಲ್ಯಾಬ್‌ನಿಂದ ಸೋರಿಕೆ 'ಅಸಂಭವ' ಎಂದಿದೆ ಎಂಬ ಕರಡು ನಕಲು ಅಸೋಸಿಯೇಟೆಡ್ ಪ್ರೆಸ್(AP) ಪಡೆದುಕೊಂಡಿದೆ ಎಂದು ವರದಿಯಾಗಿದೆ.

ಅಧ್ಯಯನ ತಂಡದ ಪ್ರಸ್ತಾಪ:

ಅಧ್ಯಯನ ತಂಡದ ಆವಿಷ್ಕಾರಗಳು ವೈರಸ್ ಮೊದಲು ಹೇಗೆ ಹೊರಹೊಮ್ಮಿತು ಎಂಬುದರ ಕುರಿತು ಹೊಸ ಒಳನೋಟ ನೀಡುತ್ತದೆ. ಆದರೆ, ಅನೇಕ ಪ್ರಶ್ನೆಗಳಿಗೆ ಅದು ಉತ್ತರವನ್ನು ನೀಡುತ್ತಿಲ್ಲ. ವರದಿಯು ಸಂಶೋಧಕರ ತೀರ್ಮಾನಗಳ ಹಿಂದಿನ ತಾರ್ಕಿಕತೆಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತದೆ. ಲ್ಯಾಬ್ ಸೋರಿಕೆ ಕಲ್ಪನೆಯನ್ನು ಹೊರತುಪಡಿಸಿ ಪ್ರತಿಯೊಂದು ಪ್ರದೇಶದಲ್ಲೂ ಹೆಚ್ಚಿನ ಸಂಶೋಧನೆ ನಡೆಸಬೇಕು ಎಂಬುದನ್ನು ಅಧ್ಯಯನ ತಂಡ ಪ್ರಸ್ತಾಪಿಸಿದೆ.

ಮಂಗಳವಾರ ಸಾರ್ವಜನಿಕವಾಗಿ ಪ್ರಕಟಗೊಳ್ಳುವ ನಿರೀಕ್ಷೆಯಿರುವ ಈ ವರದಿಯನ್ನು ವೈರಸ್‌ನ ಮೂಲವನ್ನು ಕಂಡುಹಿಡಿಯುವುದರಿಂದ ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ವಿಜ್ಞಾನಿಗಳಿಗೆ ಸಹಾಯವಾಗಬಹುದು. ಆದರೆ ಇದು ಅತ್ಯಂತ ಸೂಕ್ಷ್ಮವಾಗಿದೆ. ವರದಿಯ ಬಿಡುಗಡೆಯಲ್ಲಿನ ಪುನರಾವರ್ತಿತ ವಿಳಂಬ, ಚೀನಾದ ಕಡೆಯವರು ಅಧ್ಯಯನದ ತೀರ್ಮಾನಗಳನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಮೆರಿಕ- ಚೀನಾ ವಾಕ್ಸಮರ:

ಬೀಜಿಂಗ್​ನಲ್ಲಿನ ಸರ್ಕಾರವು ಅಧ್ಯಯನ ಬರೆಯಲು ಸಹಾಯ ಮಾಡಿದೆ ಎಂಬ ಅಂಶವಿದೆ. ಆ ವರದಿಯಲ್ಲಿನ ಅಧ್ಯಯನ ವಿಧಾನ ಮತ್ತು ಪ್ರಕ್ರಿಯೆಯ ಬಗ್ಗೆ ನಮಗೆ ಸಂದೇಹವಿದೆ ಎಂದು ಅಮೆರಿಕ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದರು. ಚೀನಾ ಸೋಮವಾರ ಆ ಟೀಕೆಯನ್ನು ತಿರಸ್ಕರಿಸಿತು.

ಯುಎಸ್ ವರದಿಯ ಬಗ್ಗೆ ಮಾತನಾಡುತ್ತಿದೆ. ಈ ಮೂಲಕ ಅಮೆರಿಕ ಡಬ್ಲ್ಯುಎಚ್​ಒನ ಅಧ್ಯಯನ ತಜ್ಞರ ತಂಡದ ಸದಸ್ಯರ ಮೇಲೆ ರಾಜಕೀಯ ಒತ್ತಡ ಹೇರಲು ಪ್ರಯತ್ನಿಸುತ್ತಿಲ್ಲವೇ? ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಪ್ರಶ್ನಿಸಿದರು.

ಅಧ್ಯಯನ ವಿಧಾನ ಮತ್ತು ಫಲಿತಾಂಶಗಳು:

ಜನವರಿ ಮಧ್ಯದಿಂದ ಫೆಬ್ರವರಿ ಮಧ್ಯದವರೆಗೆ ಕೋವಿಡ್​-19 ಕಂಡುಬಂದ ಚೀನಾದ ವುಹಾನ್​ಗೆ ಡಬ್ಲ್ಯುಎಚ್​ಒ ಅಂತಾರಾಷ್ಟ್ರೀಯ ತಜ್ಞರ ತಂಡವು ಭೇಟಿ ನೀಡಿದೆ. ಮಾಧ್ಯಮ ಪಡೆದ ಕರಡಿನಲ್ಲಿ ಸಂಶೋಧಕರು ಎಸ್ಎಆರ್​ಎಸ್-ಕೋವಿ -2 ಹೆಸರಿನ ಕೊರೊನಾ ವೈರಸ್ ಹೊರಹೊಮ್ಮುವ ಸಾಧ್ಯತೆಯ ಸಲುವಾಗಿ ನಾಲ್ಕು ಸನ್ನಿವೇಶಗಳನ್ನು ಪಟ್ಟಿ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವುದು ವೈರಸ್ ಬಾವಲಿಗಳಿಂದ ಮತ್ತೊಂದು ಪ್ರಾಣಿಯ ಮೂಲಕ ಹರಡುವುದು. ಈ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಹೇಳಿದ್ದಾರೆ. ಬಾವಲಿಗಳಿಂದ ಮನುಷ್ಯರಿಗೆ ನೇರ ಹರಡುವಿಕೆಯನ್ನು ಮೌಲ್ಯಮಾಪನ ಮಾಡಿದ್ದಾರೆ.

ಇದನ್ನೂ ಓದಿ: ವಾಯುಮಾಲಿನ್ಯ ಹೆಚ್ಚಳ ಹಿನ್ನೆಲೆ.. ಏಪ್ರಿಲ್‌ 2ರ ತನಕ ಎಲ್ಲಾ ಶಿಕ್ಷಣ ಸಂಸ್ಥೆಗಳು ಬಂದ್​​

ಬಾವಲಿಗಳು ಕೊರೊನಾ ವೈರಸ್​ಗಳನ್ನು​ ಹೊತ್ತೊಯ್ದಿವೆ. ವಾಸ್ತವವಾಗಿ, ಕೋವಿಡ್​-19ಗೆ ಕಾರಣವಾಗುವ ವೈರಸ್‌ನ ಹತ್ತಿರದ ಸಂಬಂಧಿ ಬಾವಲಿಗಳಲ್ಲಿ ಕಂಡುಬಂದಿದೆ. ಆದರೂ ಈ ಬ್ಯಾಟ್ ವೈರಸ್​ಗಳು ಮತ್ತು SARS-CoV-2 ನಡುವಿನ ವಿಕಸನೀಯ ಅಂತರವು ಹಲವು ದಶಕಗಳೆಂದು ಅಂದಾಜಿಸಲಾಗಿದೆ. ಇದು ಕಾಣೆಯಾದ ಜೋಡಣೆ ಸೂಚಿಸುತ್ತದೆ ಎಂದು ವರದಿ ಹೇಳುತ್ತದೆ.

ಪ್ಯಾಂಗೊಲಿನ್‌ಗಳಲ್ಲಿ ವ್ಯಾಪಕವಾಗಿ ಹೋಲುವ ವೈರಸ್‌ಗಳು ಕಂಡುಬಂದಿವೆ. ಇದು ಮತ್ತೊಂದು ರೀತಿಯ ಸಸ್ತನಿ. ಆದರೆ, ಮಿಂಕ್ ಮತ್ತು ಬೆಕ್ಕುಗಳು ಕೋವಿಡ್​-19 ವೈರಸ್‌ಗೆ ತುತ್ತಾಗುತ್ತವೆ. ಅವು ವಾಹಕಗಳೂ ಆಗಿರಬಹುದು ಎಂದು ಸೂಚಿಸುತ್ತದೆ ಎಂದು ಅಧ್ಯಯನ ತಂಡ ವಿಶ್ಲೇಷಿಸಿದೆ ಎಂಬುದು ಉಲ್ಲೇಖವಾಗಿದೆ.

ಅಧಿಕೃತ ಬಿಡುಗಡೆ:

ಡಬ್ಲ್ಯುಎಚ್‌ಒ ಸದಸ್ಯ ರಾಷ್ಟ್ರದಿಂದ ಜಿನೀವಾ ಮೂಲದ ರಾಜತಾಂತ್ರಿಕರಿಂದ ಮಾಧ್ಯಮ ಸಂಸ್ಥೆ ಎಪಿ ಸೋಮವಾರ ಕರಡು ಪ್ರತಿ ಸ್ವೀಕರಿಸಿದೆ. ರಾಜತಾಂತ್ರಿಕರು ಅಂತಿಮ ಆವೃತ್ತಿಯೆಂದು ಹೇಳಿದ್ದರೂ ಬಿಡುಗಡೆಗೆ ಮುಂಚೆಯೇ ವರದಿಯನ್ನು ಬದಲಾಯಿಸಬಹುದೇ ಎಂಬುದು ಸ್ಪಷ್ಟವಾಗಿಲ್ಲ. ಎರಡನೇ ರಾಜತಾಂತ್ರಿಕರು ವರದಿಯನ್ನು ಪಡೆಯುವುದನ್ನು ದೃಢಪಡಿಸಿದರು. ಪ್ರಕಟಣೆಗೆ ಮುಂಚಿತವಾಗಿ ಅದನ್ನು ಬಿಡುಗಡೆ ಮಾಡಲು ಅವರಿಗೆ ಅಧಿಕಾರವಿಲ್ಲದ ಕಾರಣ ಇಬ್ಬರೂ ತಮ್ಮ ಗುರುತು ತಿಳಿಸಲು ನಿರಾಕರಿಸಿದ್ದಾರೆ.

ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ವಾರಾಂತ್ಯದಲ್ಲಿ ವರದಿ ಸ್ವೀಕರಿಸಿದ್ದಾರೆಂದು ಒಪ್ಪಿಕೊಂಡರು. ಅದನ್ನು ಔಪಚಾರಿಕವಾಗಿ ಮಂಗಳವಾರ ಮಂಡಿಸಲಾಗುವುದು ಎಂದು ಹೇಳಿದ್ದಾರೆ.

ನಾವು ವರದಿಯನ್ನು ಓದುತ್ತೇವೆ ಮತ್ತು ಚರ್ಚಿಸುತ್ತೇವೆ. ಅದರ ವಿಷಯವನ್ನು ಜೀರ್ಣಿಸಿಕೊಳ್ಳುತ್ತೇವೆ. ಸದಸ್ಯ ರಾಷ್ಟ್ರಗಳೊಂದಿಗೆ ಮುಂದಿನ ಹಂತಗಳನ್ನು ಮಾಡುತ್ತೇವೆ ಎಂದು ಟೆಡ್ರೊಸ್ ಜಿನೀವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ABOUT THE AUTHOR

...view details