ಒಸಾಕ :ಪಶ್ಚಿಮ ಜಪಾನ್‌ನ ಒಸಾಕಾದಲ್ಲಿನ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ 27 ಜನರು ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಕಿಟಾಶಿಂಚಿಯ ಶಾಪಿಂಗ್ ಮತ್ತು ಮನರಂಜನಾ ಪ್ರದೇಶದಲ್ಲಿರುವ ಎಂಟು ಅಂತಸ್ತಿನ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭಯದಿಂದಲೇ ಹೃದಯಾಘಾತ ಸಂಭವಿಸಿ 27 ಜನರು ಮೃತಪಟ್ಟಿದ್ದಾರೆ ಎಂದು ಒಸಾಕಾ ನಗರದ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಅಕಿರಾ ಕಿಶಿಮೊಟೊ ತಿಳಿಸಿದ್ದಾರೆ.
ಓದಿ:ಕೋಡಿಂಗ್ನಲ್ಲಿ ವಿಶ್ವ ದಾಖಲೆ ಬರೆದ 'ಬೆಂಗಳೂರಿನ' 5 ವರ್ಷದ ಬಾಲಕಿ
23 ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಕಟ್ಟಡವು ಆಂತರಿಕ ಔಷಧ ಕ್ಲಿನಿಕ್, ಇಂಗ್ಲಿಷ್ ಭಾಷಾ ಶಾಲೆ ಮತ್ತು ಇತರ ವ್ಯವಹಾರಗಳನ್ನು ಹೊಂದಿದೆ. ಬೆಂಕಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಒಟ್ಟಾರೆಯಾಗಿ 70 ಅಗ್ನಿಶಾಮಕ ದಳದ ತಂಡಗಳು ಬೆಂಕಿ ನಂದಿಸಲು ಹರಸಹಾಸವೇ ಪಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.