ನವದೆಹಲಿ:ಯುದ್ಧಪೀಡಿತ ಅಫ್ಘಾನಿಸ್ತಾನದಿಂದ ರಾಯಭಾರಿ ಕಚೇರಿ ಸಿಬ್ಬಂದಿಯನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತರಲಾಗಿದೆ. ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಐಟಿಬಿಪಿ ಯೋಧರ ಜೊತೆಗೆ ಕಾರ್ಯನಿರ್ವಹಿಸುತ್ತಿದ್ದ ಶ್ವಾನಗಳನ್ನೂ ದೇಶಕ್ಕೆ ಕರೆತರಲಾಗಿದೆ. ಸ್ನೈಫರ್ ಶ್ವಾನಗಳಾದ ಮಾಯಾ, ರೂಬಿ ಮತ್ತು ಬಾಬಿಯನ್ನು ಏರ್‌ಲಿಫ್ಟ್ ಮಾಡಲಾಗಿದೆ.
ಭಾರತದ ರಾಯಭಾರಿ ಕಚೇರಿ ಭದ್ರತೆಗಿದ್ದ ಮಾಯಾ, ಬಾಬಿ, ರೂಬಿಯೂ ಸ್ವದೇಶಕ್ಕೆ ವಾಪಸ್ - ಬಾಬಿ
ಅಫ್ಘಾನಿಸ್ತಾದ ಕಾಬೂಲ್‌ನಲ್ಲಿ ಭಾರತದ ರಾಯಭಾರಿ ಕಚೇರಿ ಬಳಿ ಐಟಿಬಿಪಿ ಯೋಧರ ಜೊತೆಗೆ ಭದ್ರತೆಯ ಕಾರ್ಯನಿರ್ವಹಿಸುತ್ತಿದ್ದ ಮೂರು ಶ್ವಾನಗಳೂ ಕೂಡಾ ನಿನ್ನೆ ವಿಶೇಷ ವಿಮಾನದಲ್ಲಿ ಸ್ವದೇಶಕ್ಕೆ ಬಂದಿಳಿದಿವೆ.
ಐಟಿಬಿಪಿ ಯೋಧರೊಂದಿಗೆ ಮೂರು ಸ್ನೈಫರ್ ಶ್ವಾನಗಳು ಕಾಬೂಲ್‌ನಿಂದ ಭಾರತಕ್ಕೆ ಏರ್‌ಲಿಫ್ಟ್
ರಾಯಭಾರಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ, ಯೋಧರು ಹಾಗು ಶ್ವಾನಗಳಿದ್ದ ಭಾರತೀಯ ವಾಯುಸೇನೆಯ (IAF) C-17 ವಿಶೇಷ ವಿಮಾನ ನಿನ್ನೆ ಬೆಳಿಗ್ಗೆ 11:20ಕ್ಕೆ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬಂದಿಳಿದಿತ್ತು.