ಕರ್ನಾಟಕ

karnataka

ETV Bharat / international

ಸ್ವಾಭಿಮಾನಕ್ಕಾಗಿ ಬೀದಿಗಿಳಿದರು ಹಾಂಕಾಂಗ್​ ಜನ.. ಪ್ರತಿಭಟನೆಗಾಗಿ ಸೇರಿದ್ದವರ ಸಂಖ್ಯೆ 10 ಲಕ್ಷಕ್ಕೂ ಹೆಚ್ಚು!!

ಹಾಂಕಾಂಗ್​ ಕೈಗೊಂಡಿರುವ ಹೊಸ ವಿಧೇಯಕದ ವಿರುದ್ಧ ಅಲ್ಲಿನ ಜನ ತಿರುಗಿಬಿದ್ದಿದ್ದು,10 ಲಕ್ಷಕ್ಕೂ ಹೆಚ್ಚು ಜನ ಪ್ರತಿಭಟನೆ ನಡೆಸಿದ್ದಾರೆ.

By

Published : Jun 17, 2019, 1:55 PM IST

Updated : Jun 17, 2019, 4:40 PM IST

ಸ್ವಾಭಿಮಾನಕ್ಕಾಗಿ ಬೀದಿಗಿಳಿದರು ಹಾಂಕಾಂಗ್​ ಜನ

ಶಾಂಘೈ​: ಚೀನಾದ ತೆಕ್ಕೆಯಲ್ಲಿದ್ದರೂ ಹಾಂಕಾಂಗ್​ ತಾನು ಪ್ರತ್ಯೇಕ ದೇಶ ಎಂದು ವಾದಿಸುತ್ತಲೇ ಬಂದಿದೆ. ಹಾಂಕಾಂಗ್​-ಚೀನಾ ನಡುವಿನ ಬಿಕ್ಕಟ್ಟು ಇಂದು ನಿನ್ನೆಯದಲ್ಲ. ರಾಜಕೀಯ, ಕಾನೂನು ವಿಷಯದಲ್ಲಿ ಸ್ವಾಯತ್ತತೆ ಹೊಂದಿರುವ ಹಾಂಕಾಂಗ್​ ಕೈಗೊಂಡಿರುವ ಹೊಸ ವಿಧೇಯಕದ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ.

ಹಾಂಕಾಂಗ್​ ಪ್ರತಿಭಟನೆಗೆ ಬೆಚ್ಚಿದ ಚೀನಾ

ಭಾನುವಾರ ನಡೆದ ಪ್ರತಿಭಟನೆಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಶಾಂಘೈ ನಗರದ ಬೀದಿಗಿಳಿದು ಹೋರಾಟ ನಡೆಸಿದರು. ಇದೇ ವೇಳೆ ಪ್ರತಿಭಟನೆ ಹತ್ತಿಕ್ಕಲು ಪೊಲೀಸರೂ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಬಂಧಿತ ಆರೋಪಿಗಳನ್ನು ವಿಚಾರಣೆಗಾಗಿ ಚೀನಾಗೆ ಹಸ್ತಾಂತರಿಸಬೇಕೆಂಬ ಹೊಸ ವಿಧೇಯಕ ಜಾರಿಗೊಳಿಸಿದ್ದನ್ನು ವಿರೋಧಿಸಿ ಜನ ಹೋರಾಟಕ್ಕಿಳಿದಿದ್ದಾರೆ. ಈ ಹೊಸ ವಿಧೇಯಕದಿಂದ ಹಾಂಕಾಂಗ್​ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಜನ ಆರೋಪಿಸುತ್ತಿದ್ದಾರೆ. ಈ ಒತ್ತಾಯಕ್ಕೆ ಮಣಿದಿರುವ ಚೀನಾ ವಿಧೇಯಕವನ್ನು ಕೈಬಿಟ್ಟಿದೆ.

Last Updated : Jun 17, 2019, 4:40 PM IST

ABOUT THE AUTHOR

...view details