ಟೆಲ್ ಅವಿವ್ (ಇಸ್ರೇಲ್):ವಿಶ್ವದ ಅತ್ಯಂತ ದುಬಾರಿ ನಗರ ಯಾವುದು ಅಂದರೆ ಇನ್ಮುಂದೆ ಸಿಂಗಪುರ್, ಪ್ಯಾರೀಸ್, ದುಬೈ ಅನ್ನೋದು ಬಿಟ್ಟು ಟೆಲ್ ಅವಿವ್ ಅಂತ ಉತ್ತರಿಸಿಬೇಕಿದೆ. ಇಸ್ರೇಲ್ನ ಸಮದ್ರ ತೀರದಲ್ಲಿರುವ ಈ ನಗರ ಈಗ ವಿಶ್ವದ ಅತ್ಯಂತ ದುಬಾರಿ ನಗರವಾಗಿ ಹೊರಹೊಮ್ಮಿದೆ.
ಅಲ್ಲಿನ ಜನತೆ ತಮ್ಮ ವೇತನದ ಒಂದು ಭಾಗವನ್ನ ಜೀವನ ವೆಚ್ಚಗಳಿಗೆ ಭರಿಸಬೇಕಾದಷ್ಟು ದುಬಾರಿ ನಗರ ಎಂದು ವರದಿ ಹೇಳಿದೆ. ಎಕನಾಮಿಸ್ಟ್ ಮ್ಯಾಗಜೀನ್‌ಗೆ ಸಂಬಂಧಿಸಿದ ಸಂಶೋಧನಾ ಗುಂಪು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಪ್ರಕಾರ ಟೆಲ್ ಅವಿವ್ ವಾಸಿಸಲು ಅತ್ಯಂತ ದುಬಾರಿ ನಗರ ಎಂದಿದೆ.
ಈ ಹಿಂದೆ ಅತ್ಯಂತ ದುಬಾರಿ ನಗರಗಳ ಸಾಲಿನಲ್ಲಿ 5ನೇ ಸ್ಥಾನದಲ್ಲಿದ್ದ ನಗರವು ಈಗ ಪ್ಯಾರಿಸ್ ಮತ್ತು ಸಿಂಗಪುರರ್ನಂತಹ ದೇಶಗಳನ್ನು ಮೀರಿ ಬೆಳೆದುನಿಂತಿದೆ. ಡಾಲರ್ ಎದುರು ಶೆಕೆಲ್ (ಇಸ್ರೇಲ್ನಲ್ಲಿ ಬಳಕೆಯಲ್ಲಿರುವ ಹಣ) ಮೌಲ್ಯ ಏರಿಕೆಯಾಗಿರುವುದಕ್ಕೆ ಅರ್ಥಶಾಸ್ತ್ರಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಲ್ಲದೇ ದಿನಸಿ ಹಾಗೂ ಸಾರಿಗೆ ವೆಚ್ಚ ಸೇರಿದಂತೆ ದಿನನಿತ್ಯದ ವೆಚ್ಚಗಳ ಏರಿಕೆಯನ್ನ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ಸೂಚಿಸಿದೆ. ಆದರೆ ವರದಿಯೂ ಮಧ್ಯಮ ವರ್ಗದವರ ದೂರನ್ನು ಒಳಗೊಂಡಿಲ್ಲ.