ಕಾಬೂಲ್: ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ಅಫ್ಘಾನಿಸ್ತಾನವವನ್ನು ತಮ್ಮ ಕೈವಶ ಮಾಡಿಕೊಂಡ ಬಳಿಕ ತಾಲಿಬಾನ್ ಉಗ್ರರು ವಿಕೃತ ಖುಷಿಯಲ್ಲಿದ್ದು, ಅಮ್ಯೂಸ್ಮೆಂಟ್ ಪಾರ್ಕ್(ಮನರಂಜನಾ ಉದ್ಯಾನ) ಅನ್ನು ಸುಟ್ಟು ಭಸ್ಮ ಮಾಡಿರುವ ವಿಡಿಯೋ ದೊರೆತಿದೆ.
ಅಫ್ಘಾನ್ ಅಧ್ಯಕ್ಷರ ಕಚೇರಿ ಸೇರಿದಂತೆ ಎಲ್ಲ ಐಷಾರಾಮಿ ಸ್ಥಳಗಳಲ್ಲಿ ದಾಳಿ ನಡೆಸಿದ ತಾಲಿಬಾನ್ ಭಯೋತ್ಪಾದಕರು ಶೆಬರ್‌ಘನ್‌ನ ಬೊಖ್ದಿ ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿದ್ದ ಪ್ರತಿಮೆಗಳು ಸೇರಿದಂತೆ ಇಡೀ ಪಾರ್ಕ್ ಅನ್ನೇ ರಾತ್ರಿ ವೇಳೆ ಸುಟ್ಟು ಹಾಕಿದರು. ಇದು ತಾಲಿಬಾನಿಗಳ ಕ್ರೂರ ಕೃತ್ಯವನ್ನು ತೋರಿಸುತ್ತಿದೆ. ಈ ವಿಡಿಯೋವನ್ನು ಟ್ವಿಟರ್ ಹಂಚಿಕೊಳ್ಳಲಾಗಿದೆ.