ಕೊಲಂಬೋ(ಶ್ರೀಲಂಕಾ): ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದ ಘಟನೆ ಶ್ರೀಲಂಕಾದ ಆನೆ ಶಿಬಿರವೊಂದರಲ್ಲಿ ನಡೆದಿದೆ. 25 ವರ್ಷದ ಸುರಂಗಿ ಎಂಬ ಆನೆ ಎರಡು ಗಂಡು ಮರಿಗಳಿಗೆ ಜನ್ಮ ನೀಡಿದೆ.
ಪಿನ್ನವಾಲಾ ಆನೆ ಶಿಬಿರ ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. 1941ರ ನಂತರ ಇದೇ ಮೊದಲ ಬಾರಿಗೆ ಆನೆ ಅವಳಿ ಮರಿಗಳಿಗೆ ಜನ್ಮ ನೀಡಿದೆ ಎಂದು ಆನೆ ತಜ್ಞ ಜಯಂತ ಜಯವರ್ಧನೆ ಅಭಿಪ್ರಾಯಪಟ್ಟಿದ್ದಾರೆ. ತಾಯಿ ಆನೆ ಮತ್ತು ಮರಿಗಳು ಆರೋಗ್ಯವಾಗಿವೆ ಎಂದು ಪಿನ್ನವಾಲಾ ಆನೆ ಶಿಬಿರದ ಮುಖ್ಯಸ್ಥೆ ರೇಣುಕಾ ಭಂಡಾರನಾಯ್ಕೆ ಎಎಫ್ಬಿಗೆ ಮಾಹಿತಿ ನೀಡಿದ್ದಾರೆ.
2009ರಲ್ಲಿ ಸುರಂಗಿ ಆನೆಯು ಗಂಡು ಮರಿಗೆ ಜನ್ಮ ನೀಡಿತ್ತು. ಇದು ಎರಡನೇ ಬಾರಿಯಾಗಿದ್ದು, ಅವಳಿ ಮಕ್ಕಳಿಗೆ ಸುರಂಗಿ ಜನ್ಮ ನೀಡಿದ್ದಾಳೆ. ಆನೆ ಶಿಬಿರದಲ್ಲಿ ಸುಮಾರು 81 ಆನೆಗಳಿದ್ದು, 1975ರಲ್ಲಿ ಈ ಆನೆ ಶಿಬಿರ ಸ್ಥಾಪನೆಯಾಗಿದೆ.