ಕರ್ನಾಟಕ

karnataka

ETV Bharat / international

ದಕ್ಷಿಣ ಕೊರಿಯಾದಲ್ಲಿ ಭಾರಿ ಕಾಳ್ಗಿಚ್ಚಿಗೆ 90 ಮನೆಗಳಿಗೆ ಹಾನಿ, 6 ಸಾವಿರ ಮಂದಿ ರಕ್ಷಣೆ - ದಕ್ಷಿಣ ಕೊರಿಯಾ ಕಾಡ್ಗಿಚ್ಚಿನಲ್ಲಿ 90 ಮನೆಗಳಿಗೆ ಹಾನಿ

ದ.ಕೊರಿಯಾದ ಉಲ್ಜಿನ್‌ನಲ್ಲಿರುವ ಪರ್ವತದ ಮೇಲೆ ಶುಕ್ರವಾರ ಬೆಳಗ್ಗೆ ಪ್ರಾರಂಭವಾದ ಬೆಂಕಿಯ ಜ್ವಾಲೆ 3,000 ಹೆಕ್ಟೇರ್‌ಗಳಿಗಿಂತ ಹೆಚ್ಚು ಪ್ರದೇಶಗಳಿಗೆ ವ್ಯಾಪಿಸಿದೆ. ಇದರ ಪರಿಣಾಮ 90 ಮನೆಗಳಿಗೆ ಹಾನಿಯಾಗಿದ್ದು, ಈವರೆಗೆ 6 ಸಾವಿರ ಮಂದಿಯನ್ನು ರಕ್ಷಿಸಲಾಗಿದೆ.

S. Korean wildfire destroys 90 homes, forces 6,000 to flee
ದಕ್ಷಿಣ ಕೊರಿಯಾದಲ್ಲಿ ಭಾರಿ ಕಾಡ್ಗಿಚ್ಚಿಗೆ 90 ಮನೆಗಳಿಗೆ ಹಾನಿ, 6 ಸಾವಿರ ಮಂದಿ ರಕ್ಷಣೆ

By

Published : Mar 5, 2022, 11:44 AM IST

ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ಪೂರ್ವ ಕರಾವಳಿ ಪ್ರದೇಶದಲ್ಲಿನ ಕಾಳ್ಗಿಚ್ಚು ಪರಮಾಣು ಶಕ್ತಿ ಕೇಂದ್ರ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಸ್ಥಾವರಕ್ಕೆ ಬೆದರಿಕೆಯನ್ನು ಒಡ್ಡಿದೆ.

ಕಡಲತೀರದ ಪಟ್ಟಣವಾದ ಉಲ್ಜಿನ್‌ನಲ್ಲಿರುವ ಪರ್ವತದ ಮೇಲೆ ಶುಕ್ರವಾರ ಬೆಳಗ್ಗೆ ಪ್ರಾರಂಭವಾದ ಬೆಂಕಿಯ ಜ್ವಾಲೆ 3,000 ಹೆಕ್ಟೇರ್‌ಗಳಿಗಿಂತ ಹೆಚ್ಚು (7,400 ಎಕರೆ) ಕಾಡನ್ನು ಬಲಿ ಪಡೆದಿದ್ದು, ಸ್ಯಾಮ್‌ಚೆಕ್ ನಗರಕ್ಕೆ ವ್ಯಾಪಿಸಿದೆ. ಇದರಿಂದ ಕನಿಷ್ಠ 90 ಮನೆಗಳು ಹಾಗೂ ಇತರ ಕಟ್ಟಡಗಳಿಗೆ ಹಾನಿಯಾಗಿದೆ. ರಕ್ಷಣಾ ಪಡೆಗಳು ಸುಮಾರು 6,000 ಜನರನ್ನು ಸ್ಥಳಾಂತರಿಸಿವೆ.

ಗಾಯಗಳು ಅಥವಾ ಸಾವುಗಳ ಬಗ್ಗೆ ಸದ್ಯಕ್ಕೆ ಯಾವುದೇ ವರದಿಯಾಗಿಲ್ಲ. ದಕ್ಷಿಣ ಕೊರಿಯಾದ ಆಂತರಿಕ ಮತ್ತು ಸುರಕ್ಷತಾ ಸಚಿವಾಲಯದ ಅಧಿಕಾರಿಗಳು ಬೆಂಕಿಯ ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಶನಿವಾರ ಬೆಳಗಿನ ವೇಳೆಗೆ 1,950 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಮತ್ತು ಸೇನಾ ಪಡೆಗಳು, 51 ಹೆಲಿಕಾಪ್ಟರ್‌ಗಳು ಹಾಗೂ 273 ವಾಹನಗಳನ್ನು ಬಳಸಿ ಬೆಂಕಿ ನಿಯಂತ್ರಿಸಲು ಹರಸಾಹಸ ಪಡುತ್ತಿವೆ.

ನೂರಾರು ಅಗ್ನಿಶಾಮಕ ಸಿಬ್ಬಂದಿ ಸ್ಯಾಮ್‌ಚೆಕ್‌ನಲ್ಲಿರುವ ಎಲ್‌ಎನ್‌ಜಿ ಉತ್ಪಾದನಾ ಘಟಕಕ್ಕೆ ಬೆಂಕಿ ಹರಡುವುದನ್ನು ತಡೆಯಲು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಗೆ ಸ್ಥಳೀಯರು ಕೈಜೋಡಿಸಿದ್ದಾರೆ. ಉಲ್ಜಿನ್‌ನಲ್ಲಿರುವ ಕಡಲತೀರದ ಪರಮಾಣು ವಿದ್ಯುತ್ ಸ್ಥಾವರಕ್ಕೆ ಬೆಂಕಿ ತಗಲುವ ಬಗ್ಗೆ ಅಧ್ಯಕ್ಷ ಮೂನ್ ಜೇ-ಇನ್ ಶುಕ್ರವಾರ ಮಧ್ಯಾಹ್ನ ಎಚ್ಚರಿಕೆಯನ್ನು ನೀಡಿದ್ದಾರೆ. ಬೆಂಕಿಯನ್ನು ತಡೆಗಟ್ಟುವ ಕ್ರಮಗಳಾಗಿ ಕೆಲವು ವಿದ್ಯುತ್ ಮಾರ್ಗಗಳನ್ನು ಕಡಿತಗೊಳಿಸಲಾಗಿತ್ತು.

ಇದನ್ನೂ ಓದಿ: ಯುದ್ಧ: ಸಂಭವನೀಯ ನೈಸರ್ಗಿಕ ಅಪಾಯ, ನೀರಿನ ಕೊರತೆ ಬಗ್ಗೆ ಎಚ್ಚರಿಸಿದ ತಜ್ಞರು!

ABOUT THE AUTHOR

...view details