ಮಾಸ್ಕೋ (ರಷ್ಯಾ) :ರಷ್ಯಾ ಸೇನೆಯು ತನ್ನ ಹೊಸ ಜಿರ್ಕಾನ್ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಮತ್ತೊಂದು ಪರೀಕ್ಷಾರ್ಥ ಪ್ರಯೋಗವನ್ನು ನಡೆಸಿದೆ.
ರಷ್ಯಾದ ರಕ್ಷಣಾ ಸಚಿವಾಲಯವು ಜಿರ್ಕಾನ್ ಕ್ಷಿಪಣಿಯನ್ನು ಸೆವೆರೊಡ್ವಿನ್ಸ್ಕ್ ಜಲಾಂತರ್ಗಾಮಿ ನೌಕೆಯಿಂದ ಉಡಾಯಿಸಲಾಯಿತು. ಬ್ಯಾರೆಂಟ್ಸ್ ಸಮುದ್ರದಲ್ಲಿ ನಿಗದಿತ ಅಣುಕು ಗುರಿಯನ್ನು ಇದು ಮುಟ್ಟಿತು ಎಂದು ಹೇಳಿದೆ.
ಈ ಮೊದಲು ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಅಕ್ಟೋಬರ್‌ನಲ್ಲಿ ಪುಟಿನ್ ಅವರ ಜನ್ಮದಿನದಂದು ನಡೆಸಲಾಗಿತ್ತು. ಬಳಿಕ ಮತ್ತೊಮ್ಮೆ ಜುಲೈನಲ್ಲಿ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆಯನ್ನು ವರದಿ ಮಾಡಿತು.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, "ಸೇನೆ ಮತ್ತು ನೌಕಾಪಡೆಯನ್ನು ಅತ್ಯಾಧುನಿಕ ಮತ್ತು ಸರಿಸಾಟಿಯಿಲ್ಲದ ಶಸ್ತ್ರಾಸ್ತ್ರ ವ್ಯವಸ್ಥೆಗಳೊಂದಿಗೆ ಸಜ್ಜುಗೊಳಿಸುತ್ತಿರುವುದು ನಮ್ಮ ದೇಶದ ರಕ್ಷಣಾ ಸಾಮರ್ಥ್ಯವನ್ನು ದೀರ್ಘಾವಧಿಗೆ ನಿಜವಾಗಿಯೂ ಬಲಿಷ್ಠಗೊಳಿಸಿದೆ" ಎಂದಿದ್ದರು.
ಜಿರ್ಕಾನ್ ಶಬ್ದದ ಒಂಬತ್ತು ಪಟ್ಟು ವೇಗದಲ್ಲಿ ಹಾರಬಲ್ಲ ಸಾಮರ್ಥ್ಯ ಹೊಂದಿದೆ. 1,000 ಕಿಲೋಮೀಟರ್ (620 ಮೈಲಿ) ವ್ಯಾಪ್ತಿಯನ್ನು ಹೊಂದಿದೆ. ಇದು ರಷ್ಯಾದ ಮಿಲಿಟರಿ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಜಿರ್ಕಾನ್ ಪರೀಕ್ಷೆಗಳು ಈ ವರ್ಷದ ಕೊನೆಯಲ್ಲಿ ಪೂರ್ಣಗೊಳ್ಳಲಿವೆ.
2022ರಲ್ಲಿ ರಷ್ಯಾದ ನೌಕಾಪಡೆಯಿಂದ ಈ ಕ್ಷಿಪಣಿಯನ್ನು ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ರಷ್ಯಾದಲ್ಲಿ ಅಭಿವೃದ್ಧಿಯಲ್ಲಿರುವ ಹಲವಾರು ಹೈಪರ್ಸಾನಿಕ್ ಕ್ಷಿಪಣಿಗಳಲ್ಲಿ ಒಂದಾಗಿದೆ.
ಓದಿ:ಚೀನಾದಿಂದ ಬಲ ಪ್ರದರ್ಶನ: ತೈವಾನ್ ಕಡೆಗೆ 39 ಯುದ್ಧ ವಿಮಾನಗಳ ಹಾರಾಟ