ಮಾಸ್ಕೋ: ಮಾರಣಾಂತಿಕ ಕೊರೊನಾ ವೈರಸ್ ಚೀನಾದಾದ್ಯಂತ ವಿಸ್ತರಿಸಿಕೊಳ್ಳುತ್ತಿದ್ದಂತೆ ಪ್ರಮುಖ ರಾಷ್ಟ್ರಗಳು ತಮ್ಮ ನಾಗರಿಕರ ಆರೋಗ್ಯ ರಕ್ಷಣೆಗೆ ಚೀನಿ ಪ್ರಜೆಗಳನ್ನು ಗಡಿ ಪ್ರವೇಶಿಸದಂತೆ ನಿಷೇಧ ಹೇರುತ್ತಿವೆ.
ಕೊರೊನಾ ವೈರಾಣು ಎಫೆಕ್ಟ್: ಚೀನಿ ಪ್ರಜೆಗಳ ಗಡಿ ಪ್ರವೇಶಕ್ಕೆ ರಷ್ಯಾ ನಿಷೇಧ - ಚೀನಾದ ಕೊರೊನಾ ವೈರಸ್
ಕೊರೊನಾ ವೈರಸ್ ಹರಡುವಿಕೆಯ ವಿರುದ್ಧ ಫೆಬ್ರವರಿ 20ರಿಂದ ಎಲ್ಲಾ ಚೀನಾದ ನಾಗರಿಕರು ತನ್ನ ಭೂಪ್ರದೇಶ ಪ್ರವೇಶ ಮಾಡದಂತೆ ರಷ್ಯಾ ಸರ್ಕಾರ ಮಂಗಳವಾರ ಹೇಳಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಕೊರೊನಾ
ಕೊರೊನಾ ವೈರಸ್ ಹರಡುವಿಕೆಯ ವಿರುದ್ಧ ಫೆಬ್ರವರಿ 20ರಿಂದ ಎಲ್ಲಾ ಚೀನಾದ ನಾಗರಿಕರು ತನ್ನ ಭೂಪ್ರದೇಶ ಪ್ರವೇಶ ಮಾಡದಂತೆ ರಷ್ಯಾ ಸರ್ಕಾರ ಮಂಗಳವಾರ ಹೇಳಿದೆ ಎಂದು ಇಲ್ಲಿನ ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ರಷ್ಯಾದ ಗಡಿ-ನಾಡುಗಳ ಮೂಲಕ ಚೀನಾದ ಎಲ್ಲಾ ನಾಗರಿಕರು ಫೆಬ್ರವರಿ 20ರಿಂದ ಕೆಲಸದ ನಿಮಿತ ಪ್ರಯಾಣ, ಇತರೆ ಯಾವುದೇ ಖಾಸಗಿ ಪ್ರಯಾಣ, ಅಧ್ಯಯನ ಮತ್ತು ಪ್ರವಾಸದ ಪ್ರವೇಶವನ್ನು ಅಮಾನತುಗೊಳಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯದ ಉಸ್ತುವಾರಿ ಹೊತ್ತ ಉಪ ಪ್ರಧಾನಿ ಟಟಿಯಾನಾ ಗೋಲಿಕೋವಾ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ತಿಳಿಸಿವೆ.