ಕಾಬೂಲ್: ತಾಲಿಬಾನ್‌ಗಳು ಅಫ್ಘಾನಿಸ್ತಾವನ್ನು ವಶಕ್ಕೆ ಪಡೆದ ಮೂರು ವಾರಗಳ ಬಳಿಕ ಇದೀಗ ಅಲ್ಲಿನ ಪ್ರಜೆಗಳು ಬೀದಿಗಿಳಿದಿದ್ದು, ಅಫ್ಘಾನಿಸ್ತಾನದ ವ್ಯವಹಾರಗಳಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿರುವುದನ್ನು ವಿರೋಧಿಸಿ ಸಾವಿರಾರು ಮಂದಿ ಪಾಕ್ ರಾಯಭಾರ ಕಚೇರಿ ಬಳಿಕ ಪ್ರತಿಭಟನೆ ನಡೆಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಆಫ್ಘನ್ ಪ್ರತಿಭಟನಾಕರರು ಪಾಕಿಸ್ತಾನದ ಸಹವಾಸ ನಮಗೆ ಬೇಡ, ನಾವು ಪಾಕ್ ಕೈಗೊಂಬೆ ಆಗುವುದು ಬೇಡ, ಆಫ್ಘನ್‌ನಿಂದ ಪಾಕಿಸ್ತಾನಿಗಳೇ ತೊಲಗಿರಿ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ತಾಲಿಬಾನ್‌ಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI), ಭಾರತದ ವಿರುದ್ಧ ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸಲು ಕುಖ್ಯಾತವಾಗಿದೆ. ತಾಲಿಬಾನ್‌ನೊಂದಿಗೆ ಕೆಲಸ ಮಾಡುತ್ತಿದೆ. ಇದೀಗ ಅಮೆರಿಕ ನೇತೃತ್ವದ ಒಕ್ಕೂಟವು 20 ವರ್ಷಗಳ ಕಾಲ ಯುದ್ಧ ಮಾಡಿದ ದೇಶದಲ್ಲಿ ಹೊಸ ಸರ್ಕಾರಕ್ಕೆ ಅಡಿಪಾಯ ಹಾಕುತ್ತಿದೆ ಎನ್ನಲಾಗಿದೆ.