ಕಾಬೂಲ್: ತಾಲಿಬಾನ್ ಉಗ್ರರ ಪಡೆ ಅಫ್ಘಾನ್ ರಾಜಧಾನಿ ಕಾಬೂಲ್ ವಶಕ್ಕೆ ಪಡೆದುಕೊಂಡಿದ್ದು ಅಲ್ಲಿನ ಕಟ್ಟಡಗಳ ಗೋಡೆಗಳಲ್ಲಿದ್ದ ಮಹಿಳೆಯರ ಪೋಸ್ಟರ್ಗಳಿಗೆ ಬಣ್ಣ ಬಳಿಯುತ್ತಿದೆ. ಇದು ಅಲ್ಲಿನ ನಿವಾಸಿಗಳನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಅಶ್ರಫ್ ಘನಿ ಸರ್ಕಾರದ ಅವಧಿಯಲ್ಲಿ ಅಳವಡಿಸಲಾಗಿದ್ದ ಎಲ್ಲಾ ಪೋಸ್ಟರ್ಗಳಿಗೂ ತಾಲಿಬಾನಿಗರು ಬಣ್ಣ ಬಳಿದು ಅಳಿಸಿ ಹಾಕುತ್ತಿದ್ದಾರೆ.
ಮಹಿಳೆಯರ ಮೇಲಿನ ದಬ್ಬಾಳಿಕೆಯ ಮುನ್ಸೂಚನೆ
2001ಕ್ಕಿಂತ ಮೊದಲು ಅಘ್ಘಾನ್ನಲ್ಲಿ ತಾಲಿಬಾನ್ ಆಳ್ವಿಕೆಯಿತ್ತು. ಆ ಸಮಯದಲ್ಲಿ ಮಹಿಳೆಯರು ಏಕಾಂಗಿಯಾಗಿ ಎಲ್ಲಿಯೂ ಓಡಾಡುವಂತಿರಲಿಲ್ಲ. ಎಲ್ಲಾದರೂ ಹೋಗಬೇಕೆಂದರೆ ಪುರುಷರ ನೆರವು ಅವರಿಗೆ ಅನಿವಾರ್ಯವಾಗಿತ್ತು. ಒಂದು ವೇಳೆ ಮಹಿಳೆಯರು ಏಕಾಂಗಿಯಾಗಿ ತಿರುಗಾಡಿದರೆ ಅಂಥವರ ಮೇಲೆ ವ್ಯಭಿಚಾರದ ಆರೋಪ ಹೊರಿಸಿ ಅವರನ್ನು ಥಳಿಸಿ ಕೊಲ್ಲಲಾಗುತ್ತಿತ್ತು. ಇದೀಗ ಅಫ್ಘಾನಿಸ್ತಾನ ಮತ್ತೆ ತಾಲಿಬಾನ್ ಉಗ್ರರ ಕೈವಶವಾಗಿದೆ. ಮುಂದಿನ ದಿನಗಳಲ್ಲಿ ಇಂತಹದ್ದೇ ದುಷ್ಕೃತ್ಯಗಳು ಮರುಕಳಿಸುವ ಮುನ್ಸೂಚನೆ ಸಿಕ್ಕಿದೆ.