ಕರ್ನಾಟಕ

karnataka

ಐಸ್ ಪ್ಲಾಂಟ್​ನಲ್ಲಿ ಅಮೋನಿಯಾ ಸೋರಿಕೆ: ಇಬ್ಬರ ಸಾವು, 90 ಮಂದಿ ಅಸ್ವಸ್ಥ

By

Published : Feb 4, 2021, 7:06 PM IST

ಮನಿಲಾದ ಐಸ್‌ ತಯಾರಿಕಾ ಘಟಕವೊಂದರಲ್ಲಿ ಅಮೋನಿಯಾ ಸೋರಿಕೆಯಾಗಿದ್ದು, ಇದರಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. ಅಲ್ಲದೇ 90ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Philippine ice plant ammonia leak
ಐಸ್ ಪ್ಲಾಂಟ್​ನಲ್ಲಿ ಅಮೋನಿಯಾ ಸೋರಿಕೆ

ಮನಿಲಾ:ಫಿಲಿಪೈನ್​​ನ ರಾಜಧಾನಿ ಪ್ರದೇಶದಲ್ಲಿ ಐಸ್ ಪ್ಲಾಂಟ್‌ನಿಂದ ಅಮೋನಿಯಾ ಸೋರಿಕೆಯಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 90ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ನೂರಾರು ನಿವಾಸಿಗಳನ್ನು ಭಯಗೊಂಡು ಸುರಕ್ಷತೆ ದೃಷ್ಟಿಯಿಂದ ಅಲ್ಲಿಂದ ಓಡಿ ಹೋಗಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಅಮೋನಿಯಾ ಸೋರಿಕೆಯಿಂದ ಅಸ್ವಸ್ಥರಾದ 90ಕ್ಕೂ ಹೆಚ್ಚು ನಿವಾಸಿಗಳು ಮತ್ತು ನೌಕರರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದನ್ನು ಶೈತ್ಯೀಕರಣಕ್ಕಾಗಿ ಬಳಸಲಾಗುತ್ತಿತ್ತು. ಇದು ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಿಯಾಗಬಹುದು. 20 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಉಸಿರಾಟದ ತೊಂದರೆ, ಕಣ್ಣು ಮತ್ತು ಚರ್ಮದಲ್ಲಿ ತುರಿಕೆ ಸೇರಿದಂತೆ ಹಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓದಿ:ಮುಂದಿನ 5 ವರ್ಷಗಳವರೆಗೆ 'ನ್ಯೂ START' ಒಪ್ಪಂದ ವಿಸ್ತರಣೆ

ಐಸ್ ಪ್ಲಾಂಟ್ ಬಳಿ ನೂರಾರು ನಿವಾಸಿಗಳು ಬುಧವಾರ ತೀವ್ರವಾದ ಹೊಗೆಯನ್ನು ಕಂಡ ನಂತರ ಆ ಸ್ಥಳದಿಂದ ಓಡಿಹೋಗಿದ್ದಾರೆ. ಆದರೆ, ಅನಿಲ ಸೋರಿಕೆ ಕಡಿಮೆಯಾದ ನಂತರ ಮತ್ತೆ ಮರಳಲು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸದ್ಯಕ್ಕೆ ಟಿಪಿ ಮಾರ್ಸೆಲೊ ಐಸ್ ಪ್ಲಾಂಟ್​ನನ್ನು ಮುಚ್ಚಲು ಆದೇಶಿಸಲಾಗಿದೆ ಮತ್ತು ಹೆಚ್ಚುವರಿ ಸುರಕ್ಷತೆಗಳನ್ನು ಒದಗಿಸುವವರೆಗೆ ಅದನ್ನು ಮತ್ತೆ ತೆರೆಯಲಾಗುವುದಿಲ್ಲ. ಏಷ್ಯಾದ ಅತಿದೊಡ್ಡ ಮೀನು ಬಂದರುಗಳಲ್ಲಿ ಒಂದಾದ ನವೋಟಾಸ್‌ನಲ್ಲಿನ ಇತರ ಐಸ್ ಪ್ಲಾಂಟ್‌ಗಳು ಮತ್ತು ಕೋಲ್ಡ್ ಸ್ಟೋರೇಜ್ ಗೋದಾಮುಗಳಲ್ಲಿನ ಸುರಕ್ಷತಾ ತಪಾಸಣೆ ನಡೆಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details