ಕರ್ನಾಟಕ

karnataka

ETV Bharat / international

ಕೊರೊನಾ ಸೋಂಕಿಗೆ ಪಾಕಿಸ್ತಾನದಲ್ಲಿ ಆರನೇ ಬಲಿ.. - ಕೊರೊನಾ ಸೋಂಕಿಗೆ ಪಾಕಿಸ್ತಾನದಲ್ಲಿ ಆರನೇ ಬಲಿ

ಪ್ರಾಂತೀಯ ರಾಜಧಾನಿ ಕ್ವೆಟ್ಟಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾನೆ.

Pakistan's sixth Coronavirus death confirmed,ಕೊರೊನಾ ಸೋಂಕಿಗೆ ಪಾಕಿಸ್ತಾನದಲ್ಲಿ ಆರನೇ ಬಲಿ
ಕೊರೊನಾ ಸೋಂಕಿಗೆ ಪಾಕಿಸ್ತಾನದಲ್ಲಿ ಆರನೇ ಬಲಿ

By

Published : Mar 23, 2020, 12:35 PM IST

ಕ್ವೆಟ್ಟಾ (ಪಾಕಿಸ್ತಾನ) :ಪಾಕಿಸ್ತಾನದ ನೈರುತ್ಯ ಭಾಗದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಕೊರೊನಾ ವೈರಸ್​ನಿಂದ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದಾನೆ. ಈಗ ಆ ದೇಶದ ಒಟ್ಟಾರೆ ಕೊರೊನಾ ಸಾವಿನ ಸಂಖ್ಯೆ ಆರಕ್ಕೇರಿದೆ ಎಂದು ಸರ್ಕಾರಿ ವಕ್ತಾರ ಲಿಯಾಕತ್ ಶಾಹವಾನಿ ತಿಳಿಸಿದ್ದಾರೆ.

ಪ್ರಾಂತೀಯ ರಾಜಧಾನಿ ಕ್ವೆಟ್ಟಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 65 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾನೆ. ಬಲೂಚಿಸ್ತಾನದಲ್ಲಿ ಈವರೆಗೆ 108 ಹಾಗೂ ದೇಶಾದ್ಯಂತ 799 ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ.

ABOUT THE AUTHOR

...view details