ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕೊರೊನಾ ಲಸಿಕೆ ವಿತರಣೆಗಾಗಿ ಪಕ್ಕದ ಚೀನಾ ಮೊರೆ ಹೋಗಲು ನಿರ್ಧರಿಸಿದೆ. ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲು ಚೀನಾ ಸರ್ಕಾರಿ ಒಡೆತನದ ಕಂಪನಿ ಸಿನೊಫಾರ್ಮ್ ಮೊರೆ ಹೋಗಿದೆ ಎಂದು ರಾಷ್ಟ್ರೀಯ ಆರೋಗ್ಯ ಸೇವೆಗಳು ಮತ್ತು ಸಮನ್ವಯ ಸಚಿವಾಲಯ ಮಾಹಿತಿ ನೀಡಿದೆ.
ಕೋವಿಡ್ -19 ಲಸಿಕೆ ಸಂಗ್ರಹಕ್ಕಾಗಿ ಮೇಲ್ವಿಚಾರಣಾ ಸಂಸ್ಥೆಯಾಗಿ ರಚಿಸಲಾದ ವಿಶೇಷ ಕ್ಯಾಬಿನೆಟ್ ಸಮಿತಿಯ ಸಭೆಯಲ್ಲಿ, ಲಸಿಕೆಗಾಗಿ ಮುಂಗಡ ಕಾಯ್ದಿರಿಸುವಿಕೆಗೆ ನಿರ್ಧರಿಸಿದೆ. ಇತರ ದೇಶಗಳಂತೆ ಮುಂಚೂಣಿಯಾಗಿ ಲಸಿಕೆಯನ್ನು ಮುಂಗಡ ಕಾಯ್ದಿರಿಸಲು ಸಮಿತಿ ಸೂಚಿಸಿದ್ದು, ಇದಕ್ಕಾಗಿ ಚೀನಾದ ಸರ್ಕಾರಿ ಸ್ವಾಮ್ಯದ ಕಂಪನಿಯೊಂದಿಗೆ ಮಾತುಕತೆ ನಡೆಸಿದೆ.