ಕರಾಚಿ:ಗ್ವಾದರ್ ಬಂದರಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸಲು ಚೀನಾಗೆ ಪಾಕಿಸ್ತಾನ ಯಾವುದೇ ಸೇನಾ ನೆಲೆಗಳನ್ನು ನೀಡಿಲ್ಲ ಎಂದು ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, 60 ಶತಕೋಟಿ ಡಾಲರ್ ಮೊತ್ತದ ಚೀನಾ - ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯಲ್ಲಿ ಯಾವುದೇ ದೇಶ ಹೂಡಿಕೆ ಮಾಡಬಹುದು. ನಾವು ಯಾರಿಗೂ ಆಪ್ತರಲ್ಲ ಎಂದು ಹೇಳುವ ಮೂಲಕ ಚೀನಾಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಅರಬ್ಬಿ ಸಮುದ್ರಕ್ಕೆ ಹೊಂದಿಕೊಂಡಿರುವ ಗ್ವಾದರ್ ಬಂದರನ್ನು ಸಿಪಿಇಸಿ ಯೋಜನೆಯ ಕಿರೀಟದಲ್ಲಿರುವ ರತ್ನ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಪ್ರಕ್ಷುಬ್ಧವಾಗಿರುವ ಬಲೂಚಿಸ್ತಾನ್ ಪ್ರಾಂತ್ಯದ ಭದ್ರತೆಯೂ ಪ್ರಮುಖವಾಗಿದೆ. ಪಾಕಿಸ್ತಾನದಲ್ಲಿ ಚೀನಾದ ಆರ್ಥಿಕ ನೆಲೆಗಳಿದ್ದು, ಪ್ರಪಂಚದ ಯಾವುದೇ ದೇಶ ಇಲ್ಲಿ ಹೂಡಿಕೆ ಮಾಡಬಹುದು. ಹೀಗಾಗಿ ಅಮೆರಿಕ, ರಷ್ಯಾ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳಿಗೂ ಇಲ್ಲಿ ಅವಕಾಶಗಳು ಮುಕ್ತವಾಗಿವೆ ಎಂದು ಯೂಸುಫ್ ಹೇಳಿದ್ದಾರೆ.