ಮ್ಯಾನ್ಮಾರ್:ಮ್ಯಾನ್ಮಾರ್ನಲ್ಲಿ ಸೇನೆ ಪ್ರತಿಭಟನಾನಿರತರ ಮೇಲೆ ದಿನೇ ದಿನೆ ತನ್ನ ದಾಳಿಯನ್ನ ತೀವ್ರಗೊಳಿಸುತ್ತಿದೆ. ಮ್ಯಾನ್ಮಾರ್ ಭದ್ರತಾ ಪಡೆಗಳು ಭಾನುವಾರ ಕನಿಷ್ಠ 38 ಜನರನ್ನು ಕೊಂದಿವೆ ಎಂದು ರಾಜಕೀಯ ಕೈದಿಗಳ ವಕಾಲತ್ತು ಸಹಾಯ ಸಂಘ ಗುಂಪು ತಿಳಿಸಿದೆ.
ತೀವ್ರಗೊಂಡ ಮ್ಯಾನ್ಮಾರ್ ಹಿಂಸಾಚಾರ: 38 ಜನರನ್ನು ಹತ್ಯೆ ಮಾಡಿದ ಭದ್ರತಾ ಪಡೆ
ಮ್ಯಾನ್ಮಾರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ 38 ಜನರು ಮೃತಪಟ್ಟಿದ್ದಾರೆ. ದೇಶದಲ್ಲಿ ಹಿಂಸಾಚಾರ ಮುಂದುವರಿಯುತ್ತಿದ್ದು, ವಿಶ್ವಸಂಸ್ಥೆ ಮಧ್ಯಪ್ರವೇಶಕ್ಕೆ ಒತ್ತಡ ಕೇಳಿ ಬಂದಿದೆ.
ಹತ್ಯೆಯಾದವರಲ್ಲಿ 22 ಮಂದಿ ಯಾಂಗೊನ್‌ನ ಹ್ಲಿಂಗ್ಥಾರ್ಯದವರಾಗಿದ್ದಾರೆ. ಭಾನುವಾರ ಸಾವಿಗೀಡಾದವರ ಸಂಖ್ಯೆ ಮಾರ್ಚ್ 3 ರಂದು ಹತ್ಯೆಯಾದವರ ಸಾವಿನ ಸಂಖ್ಯೆಗೆ ಸಮನಾಗಿದೆ. ಅಲ್ಲಿನ ಮಿಲಿಟರಿ ಸರ್ಕಾರವು, ದೇಶದ ಅತಿದೊಡ್ಡ ನಗರವಾದ ಯಾಂಗೊನ್ ಎರಡು ಪಟ್ಟಣಗಳ ಮೇಲೆ ಕಾನೂನು ಸಮರ ಘೋಷಿಸಿದ ನಂತರ, ಕನಿಷ್ಠ 38 ಜನರು ಸೇನಾ ದಾಳಿಗೆ ಬಲಿಯಾಗಿದ್ದಾರೆ.
ಕಳೆದ ತಿಂಗಳು ನಡೆದ ಮಿಲಿಟರಿ ಕ್ಷಿಪ್ರ ದಂಗೆ ವಿರೋಧಿಸಿ ದೇಶಾದ್ಯಂತ ಜನರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಹೀಗಾಗಿ ಹಿಂಸಾಚಾರ ಹೆಚ್ಚುತ್ತಿದ್ದು, ಮ್ಯಾನ್ಮಾರ್ ಬಿಕ್ಕಟ್ಟು ಬಗೆಹರಿಸುವಂತೆ ವಿಶ್ವಸಂಸ್ಥೆ ಮೇಲೆ ಒತ್ತಡ ತರಲಾಗುತ್ತಿದೆ.