ಕರ್ನಾಟಕ

karnataka

ETV Bharat / international

ಕೊನೆಗೂ ತಾಲಿಬಾನ್​ ಉಸ್ತುವಾರಿ ವಹಿಸಿಕೊಂಡ ಮುಲ್ಲಾ ಒಮರ್ ಪುತ್ರ

ತಾಲಿಬಾನ್​ ಸಂಘಟನೆಯ ಕಮಾಂಡರ್​ ನೇಮಕದ ವಿಚಾರವಾಗಿ, ಸಂಘಟನೆಯ ಸದಸ್ಯರಲ್ಲಿಯೇ ತೀವ್ರ ಭಿನ್ನಾಭಿಪ್ರಾಯ ಉಂಟಾಗಿ, ತಾಲಿಬಾನಿನ ಉಸ್ತುವಾರಿ ಕುರ್ಚಿ ಖಾಲಿಯೇ ಉಳಿದಿತ್ತು. ಆದರೆ, ಈಗ ಈ ಸ್ಥಾನಕ್ಕೆ ಮುಲ್ಲಾ ಒಮರ್ ಪುತ್ರ ಮುಲ್ಲಾ ಯಾಕೂಬ್ ನೇಮಕಗೊಂಡಿದ್ದಾರೆ.

Mullah Omar's son
ಮುಲ್ಲಾ ಒಮರ್ ಪುತ್ರ ಮುಲ್ಲಾ ಯಾಕೂಬ್

By

Published : Jun 1, 2020, 7:52 PM IST

ಕಾಬೂಲ್(ಅಫ್ಘಾನಿಸ್ತಾನ್​): ಅಫ್ಘಾನಿಸ್ತಾನದ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ನಿಧನದ ಬಳಿಕ ತಾಲಿಬಾನ್​ ಸಂಘಟನೆಯ ನಾಯಕತ್ವದ ಬಗ್ಗೆ ಭಿನ್ನಾಭಿಪ್ರಾಯಗಳು ಬುಗಿಲೆದ್ದಿದ್ದು, ಇದೀಗ ಮುಲ್ಲಾ ಒಮರ್ ಪುತ್ರ ಮುಲ್ಲಾ ಯಾಕೂಬ್ ತಾಲಿಬಾನ್​​ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಮುಲ್ಲಾ ಯಾಕೂಬ್​​ಗೆ ತಾಲಿಬಾನ್​​ ಸಂಘಟನೆಯ ಉಸ್ತುವಾರಿ ನೀಡಲು ಒಪ್ಪಿದವರಿಗಿಂತ ವಿರೋಧಿಸಿದವರೇ ಹೆಚ್ಚಾಗಿದ್ದಾರೆ. ಆದರೆ ತಾಲಿಬಾನ್​ ಸಂಘಟೆನಗೂ ಸಹ ಕೊರೊನಾ ಮಹಾಮಾರಿ ತಗುಲಿದ್ದು, ಸಂಘಟನೆಯಲ್ಲಿನ ನೂರಾರು ಕಾರ್ಯಕರ್ತರು ಕೊರೊನಾ ರೋಗಕ್ಕೆ ತುತ್ತಾದ ಹಿನ್ನೆಲೆ, ಯಾಕೂಬ್​ಗೆ ತಾಲಿಬಾನ್​​ ಕಮಾಂಡರ್​ ಆಗುವ ಯೋಗ ಕೂಡಿ ಬಂದಂತಾಗಿದೆ.

ಮುಲ್ಲಾ ಯಾಕೂಬ್ ತಾಲಿಬಾನ್ ಚಳವಳಿಯನ್ನ ನಿಯಂತ್ರಣಕ್ಕೆ ಪಡೆದು ಅದನ್ನು ಮುನ್ನಡೆಸುವ ಜವಾಬ್ದಾರಿಯನ್ನು ತಮ್ಮ ಹೆಗಲಿಗೇರಿಸಿಕೊಂಡಿದ್ದಾರೆ. ತಾಲಿಬಾನ್​ ಸಂಘಟನೆಯಲ್ಲಿ ಹಲವಾರು ಭಿನ್ನಾಭಿಪ್ರಾಯಗಳಿಂದಾಗಿ ತಾಲಿಬಾನ್ ನಾಯಕತ್ವ ಅಸ್ತವ್ಯಸ್ತವಾಗಿತ್ತು. ಅದಲ್ಲದೇ ಹಲವಾರು ನಾಯಕರು ಕೊರೊನಾ ಸೋಂಕಿಗೆ ಒಳಗಾಗಿರುವುದು ಸಂಘಟನೆಯ ಮೇಲೆ ತೀವ್ರ ಪರಿಣಾಮ ಬೀರಿದೆ.

ತಾಲಿಬಾನ್​ ಶಾಂತಿ ಒಪ್ಪಂದದಿಂದಾಗಿ ಸಂಘಟನೆಯ ಕಾರ್ಯಕರ್ತರನ್ನು ಅಫ್ಘಾನ್​​​​​ ಅಧಿಕಾರಿಗಳು ಸೆರೆ ಹಿಡಿದು ಜೈಲಿನಲ್ಲಿ ಇರಿಸಿದ್ದರು. ಆದರೆ, ಕೊರೊನಾ ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆ, ಈ ಎಲ್ಲ ಖೈದಿಗಳನ್ನು ಬಿಡುಗಡೆಗೊಳಿಸಲು ಅಫಘಾನಿಸ್ತಾನದ​ ಅಧಿಕಾರಿಗಳು ನಿರ್ಧರಿದ್ದಾರೆ.

ತಾಲಿಬಾನ್‌ ಸಂಘಟನೆಯೊಳಗಿನ ಭಿನ್ನಾಭಿಪ್ರಾಯದ ಸುಳಿವು ಕಾಬೂಲ್‌ನಲ್ಲಿನ ಅಂತಾರಾಷ್ಟ್ರೀಯ ಬೆಂಬಲಿತ ಸರ್ಕಾರದೊಂದಿಗೆ ಹಿಂಸಾತ್ಮಕ ಪೈಪೋಟಿಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿರುವುದರಿಂದ ಹಾಗೂ ಶಾಂತಿ ಪ್ರಕ್ರಿಯೆಯ ಮುಂದಿನ ಹಂತದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣದಿಂದಾಗಿ ಯಾಕೂಬ್​​ನನ್ನು ಕಮಾಂಡರ್​ ಆಗಿ ಯೋಜಿಸಲಾಗಿದೆ ಎಂಬುದು ಅಫ್ಘಾನಿಸ್ತಾನಿ ಮಾಧ್ಯಮಗಳಲ್ಲಿ ವರದಿಯಾಗಿವೆ.

ಮುಲ್ಲಾ ಯಾಕೂಬ್​ಗೆ ತಾಲಿಬಾನಿನ ನಾಯಕತ್ವ ನೀಡುವುದರಿಂದ ಈ ಹಿಂದೆ ಅಫ್ಘಾನ್​​ನಲ್ಲಿ ವಾಸಿಸುತ್ತಿದ್ದ ಕ್ವೆಟ್ಟಾ-ಶುರಾ-ತಾಲಿಬಾನ್​​ನ ಕೆಲವು ಹಿರಿಯ ಸದಸ್ಯರ ಪಾತ್ರವನ್ನು ದುರ್ಬಲಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂಬುದು ಸಂಘಟನೆಯಲ್ಲಿನ ಕೆಲ ಸದಸ್ಯರ ಅಭಿಪ್ರಾಯವಾಗಿದೆ ಎನ್ನಲಾಗಿದೆ. ಇಷ್ಟು ದಿನಗಳ ಕಾಲ ಯಾಕೂಬ್​ಗೆ ತಾಲಿಬಾನ್​ ನಾಯಕತ್ವ ನೀಡಲು ಹಿಂದೇಟು ಹಾಕಲು ಇದೂ ಸಹ ಒಂದು ಕಾರಣ ಎನ್ನಲಾಗಿದೆ.

ಜುಲೈ 2015 ರಲ್ಲಿ ಮುಲ್ಲಾ ಒಮರ್ ಸಾವು ಬಹಿರಂಗವಾದಾಗ ಮುಲ್ಲಾ ಯಾಕೂಬ್ ತನ್ನ ತಂದೆಯ ಸ್ಥಾನದಲ್ಲಿ ಕುಳಿತು ಉತ್ತರಾಧಿಕಾರಿಯಾಗುವ ಪ್ರಯತ್ನವನ್ನು ಮಾಡಿದ್ದನು. ಸರ್ವಾಧಿಕಾರಿ ಧೋರಣೆಯಿಂದಾಗಿ ಸಂಘಟನೆಗೆ ಪೆಟ್ಟು ಬೀಳಬಹುದು ಎಂಬ ಕಾರಣಕ್ಕಾಗಿಯೂ ಸಹ ಯಾಕೂಬ್​ನನ್ನು ನಾಯಕನನ್ನಾಗಿಸಲು ತಾಲಿಬಾನ್​​ ಸಂಘಟನೆಯ ಕೆಲವರು ಒಪ್ಪಿರಲಿಲ್ಲ.

1996 ರಿಂದ 2001 ರವರೆಗೆ ತಾಲಿಬಾನ್, ಅಫ್ಘಾನಿಸ್ತಾನವನ್ನು ಆಳಿತ್ತು ಹಾಗೂ 9/11 ದಾಳಿಗೆ ಯುಎಸ್ ನೇತೃತ್ವದ ಪ್ರತೀಕಾರದಿಂದ ದೇಶದಿಂದ ಹೊರಹಾಕಲ್ಪಟ್ಟಿತು. ಇದು ಒಸಾಮಾ ಬಿನ್ ಲಾಡೆನ್ ರೂಪಿಸಿದ್ದ ದಾಳಿಯಾಗಿತ್ತು.

ABOUT THE AUTHOR

...view details