ಕರ್ನಾಟಕ

karnataka

ETV Bharat / international

ಪುಲ್ವಾಮಾ ದಾಳಿಯಲ್ಲಿ ಜೈಷೆ ಸಂಸ್ಥೆ ಕೈವಾಡವಿಲ್ಲ: ‘ಪಾಕಿ’ಗಳಿಂದ ಮತ್ತೊಂದು ಸುಳ್ಳಿನ ಬಾಂಬ್​!

ಇಸ್ಲಾಮಾಬಾದ್​: ಜೈಷೆ ಮೊಹಮ್ಮದ್​ ಫೌಂಡರ್​ ಮಸೂದ್​ ಅಜರ್​ ನಮ್ಮ ದೇಶದಲ್ಲೇ ಇದ್ದಾನೆ ಎಂದು ಹೇಳಿದ ಮರುದಿನವೇ ಮತ್ತೊಂದು ಹಸಿ ಸುಳ್ಳನ್ನ ಪಾಕಿಸ್ತಾನ ಹೇಳಿದೆ. ಒಂದು ಕಡೆ ಶಾಂತಿ ಮಂತ್ರ ಜಪಿಸುತ್ತಿರುವ ಇಮ್ರಾನ್​ ಖಾನ್​ ಆದರೆ, ಮತ್ತೊಂದು ಕಡೆ ಸೇನೆ ಗಡಿಯಲ್ಲಿ ಅಪ್ರಚೋದಿತ ದಾಳಿ ಮುಂದುವರಿಸಿದೆ.

ಕೃಪೆ: Twitter

By

Published : Mar 2, 2019, 1:14 PM IST

ಇನ್ನು ಮಗದೊಂದು ಕಡೆ ಪಾಕ್​ ವಿದೇಶಾಂಗ ಸಚಿವರು ಸುಳ್ಳಿನ ಸರಮಾಲೆಯನ್ನೇ ಮುಂದುವರಿಸಿದ್ದಾರೆ. ಹೌದು, ಮಸೂದ್​ ನಮ್ಮ ದೇಶದಲ್ಲೇ ಇದ್ದಾನೆ ಎಂದು ಪಾಕ್​ ವಿದೇಶಾಂಗ ಸಚಿವ ಷಾ ಮೊಹಮ್ಮದ್​ ಖುರೇಷಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆತ ಪಾಕ್​ನಲ್ಲೇ ಇದ್ದಾನೆ. ಆದ್ರೆ ಅಜರ್​ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಮನೆಯಿಂದ ಹೊರ ಬಾರದ ಸ್ಥಿತಿಯಲ್ಲಿದ್ದಾರೆ ಎಂದಿದ್ದರು. ಇಂತಹ ಹಸಿ ಹಸಿ ಸುಳ್ಳು ಹೇಳಿದ್ದ ಖುರೇಷಿ ಮತ್ತೊಂದು ಬಾಂಬ್​ ಸಿಡಿಸಿದ್ದಾರೆ.

ಅಂತಾರಾಷ್ಟ್ರೀಯ ಮೀಡಿಯಾ ಸಂಸ್ಥೆಗೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ ಪಾಕ್​ ವಿದೇಶಾಂಗ ಸಚಿವ ಖುರೇಷಿ, ನಿಷೇಧಿತ ಉಗ್ರ ಸಂಸ್ಥೆ ಜೈಷೆ ಸಂಸ್ಥ ನಾಯಕರ ಜೊತೆ ಪಾಕ್​ ಸರ್ಕಾರ ಟಚ್​ನಲ್ಲಿದೆ. ಜೈಷೆ ಉಗ್ರ ಸಂಸ್ಥೆಯ ನಾಯಕರನ್ನು ವಿಚಾರಿಸಿದ್ದೇವೆ. ಪುಲ್ವಾಮಾ ದಾಳಿಯಲ್ಲಿ ತಾವು ಭಾಗಿಯಾಗಿಲ್ಲ ಎಂದು ಅವರು ಹೇಳಿದ್ದಾರೆ ಅಂತಾ ತಿಳಿಸಿದ್ದಾರೆ.

ಪುಲ್ವಾಮಾ ದಾಳಿ ಸಂಬಂಧಿಸಿದಂತೆ ಜೈಷೆ ಉಗ್ರ ಸಂಘಟನೆಯನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಆದರೆ ಅವರು ಈ ದಾಳಿಯನ್ನ ಎಸೆಗಿಲ್ಲ ಎಂದು ಹೇಳಿದ್ದಾರೆ. ನಮಗೂ ಈ ವಿಷಯದ ಬಗ್ಗೆ ಗೊಂದಲಗಳಿವೆ ಎಂದು ಖುರೇಷಿ ಸಂದರ್ಶನದಲ್ಲಿ ಹೇಳಿದ್ದಾರೆ. ಅವರೊಂದಿಗೆ ಸಂಪರ್ಕಿಸಿದ್ದು ಯಾರೆಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಅವರಿಗೆ ಗೊತ್ತಿರುವ ವ್ಯಕ್ತಿಗಳೇ’ ಎಂದು ಖುರೇಷಿ ಉತ್ತರಿಸಿದ್ದಾರೆ

40ಕ್ಕೂ ಹೆಚ್ಚು ಸಿಆರ್​ಪಿಎಫ್​ ಯೋಧರ ಪ್ರಾಣವನ್ನು ಬಲಿ ತೆಗೆದುಕೊಂಡ ಪುಲ್ವಾಮಾ ದಾಳಿಯ ಹೊಣೆ ಜೈಷೆ ಉಗ್ರ ಸಂಸ್ಥೆ ಹೊತ್ತಿಕೊಂಡಿರುವ ವಿಷಯ ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಪಾಕಿಸ್ತಾನ ಮಾತ್ರ ಈಗ ಜೈಷೆ ಕೈವಾಡ ಇಲ್ಲ ಎಂದು ಪ್ರತಿಪಾದಿಸಲು ಆರಂಭಿಸಿದೆ.

ABOUT THE AUTHOR

...view details