ಇಸ್ಲಾಮಾಬಾದ್: ತನ್ನದಲ್ಲದ ವಿಚಾರಕ್ಕೆ ಅತಿಯಾಗಿ ಮೂಗು ತೂರಿಸುವ ಪಾಕಿಸ್ತಾನ ತನ್ನ ದೇಶದ ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಈ ಕಾಳಜಿಯನ್ನು ತೋರಿಸುತ್ತಿಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಇಲ್ಲಿದೆ ನೋಡಿ..!
ಪಾಕಿಸ್ತಾನದ ಆರ್ಥಿಕತೆ ಹಳ್ಳ ಹಿಡಿದಿರುವುದು ಹೊಸ ವಿಷಯವಲ್ಲ. ಇಲ್ಲಿನ ಜಿಡಿಪಿ ಸಹ ಮಕಾಡೆ ಮಲಗಿ ವರ್ಷಗಳೇ ಕಳೆದಿವೆ. ಹೊಸ ವಿಷ್ಯ ಏನಂದ್ರೆ ಪ್ರತಿನಿತ್ಯ ಅಗತ್ಯವಿರುವ ಹಾಲಿನ ಬೆಲೆ ಗಣನೀಯ ಏರಿಕೆ ಕಂಡಿದೆ. ಅದೂ ಸಹ ಶ್ರೀಮಂತರೂ ಹೌಹಾರುವ ಮಟ್ಟಿಗೆ ಎಂದರೆ ನೀವು ನಂಬಲೇಬೇಕು..!
'ಜಮ್ಮು-ಕಾಶ್ಮೀರ ಭಾರತದ ರಾಜ್ಯ'... ವಿಶ್ವಸಂಸ್ಥೆಯಲ್ಲೇ ಹೇಳಿಕೆ ನೀಡಿದ ಪಾಕ್ ವಿದೇಶಾಂಗ ಸಚಿವ!
ಪಾಕಿಸ್ತಾನದ ಪ್ರಮುಖ ನಗರ ಕರಾಚಿಯಲ್ಲಿ ಸದ್ಯ ಪ್ರತಿ ಲೀಟರ್ ಹಾಲಿನ ಬೆಲೆ ₹120ರಿಂದ ₹140 ರೂ. ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸಿಂಧ್ ಪ್ರಾಂತ್ಯದಲ್ಲಿ ಈ ಬೆಲೆ ₹150ರ ಸನಿಹದಲ್ಲಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಸಹ ಗಗನಕ್ಕೆ..!
ಉಗ್ರ ಪೋಷಕ ರಾಷ್ಟ್ರ ಪಾಕಿಸ್ತಾನದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ವಿಚಾರ ಗುಟ್ಟಾಗೇನು ಉಳಿದಿಲ್ಲ. ಸದ್ಯ ಹಾಲಿನ ಬೆಲೆ ತುಟ್ಟಿಯಾಗಿದ್ದರೆ, ಅತ್ತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸಹ ಗಗನಮುಖಿಯಾಗಿದೆ.
ಪೆಟ್ರೋಲ್ ₹113ರೂ ಇದ್ದರೆ ಡೀಸೆಲ್ ಬೆಲೆ ₹91 ರೂ.ನಲ್ಲಿದೆ. ಬೇಡಿಕೆ ಹೆಚ್ಚಳ ಮತ್ತ ಸರ್ಕಾರದ ಕೆಲ ಧೋರಣೆಗಳಿಂದ ಪಾಕಿಸ್ತಾನದ ಜನತೆ ಬೆಲೆ ಏರಿಕೆ ಬಿಸಿಯಲ್ಲಿ ಬೆಂದು ಹೋಗಿದ್ದಾರೆ.