ಕರ್ನಾಟಕ

karnataka

ವಿಶ್ವದ ಅತಿ ಕುಬ್ಜ ವ್ಯಕ್ತಿ ಖಾಗೇಂದ್ರ ಥಾಪಾ ಮಾಗರ್ ನಿಧನ

By

Published : Jan 18, 2020, 6:19 AM IST

ನ್ಯೂಮೇನಿಯಾದಿಂದ ಬಳಲುತ್ತಿದ್ದ ವಿಶ್ವದ ಕುಬ್ಜ ವ್ಯಕ್ತಿ ಖಾಗೇಂದ್ರ ಥಾಪಾ ನಿಧನ. ಕಠ್ಮಂಡುವಿನ ಪೋಖರಾ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದ ಥಾಪಾ.

Khagendra Thapa Magar, once world's shortest man, dies at 27
ವಿಶ್ವದ ಅತಿ ಕುಬ್ಜ ವ್ಯಕ್ತಿ' ಎಂಬ ಖ್ಯಾತಿ ಪಡೆದಿದ್ದ ಖಾಗೇಂದ್ರ ಥಾಪಾ ಮಾಗರ್ ನಿಧನ

ಕಠ್ಮಂಡು (ನೇಪಾಳ): ಒಂದು ಕಾಲದಲ್ಲಿ 'ವಿಶ್ವದ ಅತಿ ಕುಬ್ಜ ವ್ಯಕ್ತಿ' ಎಂಬ ಖ್ಯಾತಿ ಪಡೆದಿದ್ದ ನೇಪಾಳಿ ಮೂಲದ ಖಾಗೇಂದ್ರ ಥಾಪಾ ಮಾಗರ್ (27) ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಿಧನರಾಗಿದ್ದಾರೆ.

ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಇಲ್ಲಿನ ಪೋಖರಾ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ ಎಂದು ಖಾಗೇಂದ್ರ ಥಾಪಾ ಮಾಗರ್ ಫೌಂಡೇಶನ್‌ನ ಅಧ್ಯಕ್ಷ ಮಿನ್‌ಬಹದ್ದೂರ್ ರಾಣಾ ಮಾಹಿತಿ ನೀಡಿದ್ದಾರೆ.

1992 ರ ಅಕ್ಟೋಬರ್ 14 ರಂದುಥಾಪಾ ಪೋಖರಾದಲ್ಲಿ ಜನಿಸಿದ್ದರು.ಕೇವಲ 67 ಸೆಂ.ಮೀಟರ್ ಎತ್ತರ ಮತ್ತು 6 ಕೆಜಿ ತೂಕವಿದ್ದ ಥಾಪಾ ಅವರನ್ನು 2010ರಲ್ಲಿ ವಿಶ್ವದ ಅತಿ ಕುಬ್ಜ ವ್ಯಕ್ತಿ ಎಂದು ಗಿನ್ನಿಸ್​​ ದಾಖಲೆಗೆ ಸೇರಿದ್ದರು.

ಬಳಿಕ 59.93 ಸೆಂ.ಮೀಟರ್​ ಎತ್ತರ ಮತ್ತು 5 ಕೆ.ಜಿ.ತೂಕ ಹೊಂದಿದ್ದಫಿಲಿಫೈನ್ಸ್​​​ ಜುನ್ರಿ ಬಾಲಾವಿಂಗ್‌ ಅವರುಥಾಪಾ ದಾಖಲೆಯನ್ನು ಅಳಿಸಿ ಹಾಕಿ ವಿಶ್ವದ ಅತಿ ಕುಬ್ಜ ವ್ಯಕ್ತಿ ಬಿರುದನ್ನು ಪಡೆದುಕೊಂಡರು.

ABOUT THE AUTHOR

...view details