ಟೋಕಿಯೋ (ಜಪಾನ್): ಕಳೆದ ಕೆಲ ದಿನಗಳಿಂದ ನೈರುತ್ಯ ಜಪಾನ್ನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಜನಜೀವನವನ್ನ ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಮನೆಗಳು ನೀರುಪಾಲಾಗಿದ್ದು, ಹಿರೋಶಿಮಾ, ನಾಗಸಾಕಿ, ಫುಕುವೋಕಾ ಮತ್ತು ಸಾಗಾ ಈ ನಾಲ್ಕು ಪ್ರದೇಶಗಳ 1.2 ಮಿಲಿಯನ್ ಜನರನ್ನು ಸ್ಥಳಾಂತರಿಸಲು ಜಪಾನ್ ಸರ್ಕಾರ ಆದೇಶಿಸಿದೆ.
ಹಿರೋಶಿಮಾ ಪ್ರದೇಶದ ಮೂಲಕ ಹಾದು ಹೋಗುವ ಮೂರು ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ-ಭೂಕುಸಿತ ಉಂಟಾಗಿದೆ. ಈಗಾಗಲೇ ಭೂಕುಸಿತದಿಂದಾಗಿ ಓರ್ವ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.