ಟೋಕಿಯೋ: ಜಪಾನ್ ಬಂದರ್ಗೆ ಬಂದ ಕ್ರೂಸ್ ಹಡಗಿನಲ್ಲಿ 39 ಮಂದಿಯಲ್ಲಿ ಹೊಸದಾಗಿ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಪಾನ್ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ಜಪಾನ್ ಬಂದರ್ನಲ್ಲಿ ಹೊಸದಾಗಿ 39 ಮಂದಿಗೆ ಕೊರೊನಾ ವೈರಸ್!
ಜಪಾನ್ ಬಂದರ್ನಲ್ಲಿ 39 ಕೊರೋನ ವೈರಸ್ ಪತ್ತೆ!
ಫೆಬ್ರವರಿ 3 ರಂದು ಟೋಕಿಯೊ ಬಳಿಯ ಯೊಕೊಹಾಮಾ ಬಂದರಿಗೆ ಕ್ರೂಸ್ ಹಡಗು ಹಿಂದಿರುಗಿದ ಬಳಿಕ ಪರಿಶೀಲಿಸಿದ ಅಧಿಕಾರಿಯೊಬ್ಬರು ಈ ವೈರಸ್ ಇರುವುದನ್ನ ದೃಢಪಡಿಸಿದ್ದಾರೆ ಎಂದು ಎಂದು ಸಚಿವಾಲಯ ತಿಳಿಸಿದೆ.
ಜಪಾನಿನ ಆರೋಗ್ಯ ಅಧಿಕಾರಿಗಳು ಹಡಗಿನ ಎಲ್ಲಾ 3,700 ಪ್ರಯಾಣಿಕರು ಮತ್ತು ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ ಪ್ರಾರಂಭಿಸಿದ್ದು, ಒಟ್ಟು 39 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿವೆ. ಈವರೆಗೆ ಜಪಾನ್ನಲ್ಲಿ ಸುಮಾರು 203 ವೈರಸ್ ಪ್ರಕರಣಗಳು ಧೃಡಪಟ್ಟಿವೆ.