ಕಾಬೂಲ್(ಆಫ್ಘಾನಿಸ್ತಾನ): ತಾಲಿಬಾನ್ ಉಗ್ರರು ಈಗಾಗಲೇ ಆಫ್ಘಾನಿಸ್ತಾನದಲ್ಲಿ ಸಂಪೂರ್ಣವಾಗಿ ತಮ್ಮ ಪ್ರಾಬಲ್ಯ ಸಾಧಿಸಿದ್ದು, ಎಲ್ಲ ಪ್ರದೇಶಗಳನ್ನ ತಮ್ಮ ಹತೋಟಿಗೆ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮೌಲಾನ್ ಮಸೂದ್ ಅಜರ್ ಅಲ್ಲಿನ ಮುಖ್ಯಸ್ಥನ ಭೇಟಿ ಮಾಡಿದ್ದಾರೆಂಬ ಮಾಹಿತಿ ಬಹಿರಂಗಗೊಂಡಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿಜಯ ಪತಾಕೆ ಹಾರಿಸಿರುವುದಕ್ಕೆ ಈಗಾಗಲೇ ಮಸೂದ್ ಅಜರ್ ಹರ್ಷ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ಅಲುನ ಮುಖ್ಯಸ್ಥರ ಭೇಟಿ ಮಾಡಿದ್ದಾಗಿ ವರದಿಯಾಗಿದೆ. ಜೊತೆಗೆ ಜಮ್ಮು-ಕಾಶ್ಮೀರ ವಿಚಾರದಲ್ಲಿ ತಮಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಭಾರತದಲ್ಲಿ ಬಂಧಿಯಾಗಿದ್ದ ಮೌಲಾನ್ ಮಸೂದ್ ಅಜರ್ ಬಿಡುಗಡೆಗೆ ಪಾಕ್ ಉಗ್ರರು, ಕಂಠ್ಮಡು- ಲಖನೌ ವಿಮಾನ ಹೈಜಾಕ್ ಮಾಡಿದ್ದರು. ಇದನ್ನ ಕಂದಹಾರ್ನಲ್ಲಿ ಇಳಿಸಿದ ಬಳಿಕ ಮಸೂದ್ ಅಜರ್ ಬಿಡುಗಡೆಗೆ ಬೇಡಿಕೆ ಇಟ್ಟಿದ್ದರು. ಈ ವೇಳೆ ಉಗ್ರನನ್ನ ರಿಲೀಸ್ ಮಾಡಲಾಗಿತ್ತು.