ಇಸ್ಲಾಮಾಬಾದ್:ಸಿಂಧ್ ಐಜಿಪಿ ಮುಷ್ತಾಕ್ ಮೆಹರ್ ಅವರ ಅಪಹರಣ ಮತ್ತು ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಯಕನ ಬಂಧನದ ವಿಚಾರದಲ್ಲಿ, ಇಂಟೆಲ್ ಏಜೆನ್ಸಿ, ಐಎಸ್ಐ ಮತ್ತು ರೇಂಜರ್ಸ್ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ಪಾಕಿಸ್ತಾನ ಸೇನೆಯು ಮಂಗಳವಾರ ಹೇಳಿದೆ.
ಪಿಎಂಎಲ್-ಎನ್ ನಾಯಕ ಕ್ಯಾಪ್ಟನ್ (ನಿವೃತ್ತ) ಮೊಹಮ್ಮದ್ ಸಫ್ದಾರ್ ಅವನ್ ಅವರ ಬಂಧನ ಮತ್ತು ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ ಎಂದು ಪಾಕ್ ಸೇನೆ ಹೇಳಿದೆ.
ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರ ಆದೇಶದ ಮೇರೆಗೆ ಸಿಂಧ್ ಇನ್ಸ್ಪೆಕ್ಟರ್ ಜನರಲ್ ಅವರ ಕುಂದುಕೊರತೆಗಳನ್ನು ಪರಿಹರಿಸಲು ವಿಚಾರಣಾ ನ್ಯಾಯಾಲಯವನ್ನು ರಚಿಸಲಾಗಿದೆ ಎಂದು ಮಿಲಿಟರಿ ಮಾಧ್ಯಮ ವ್ಯವಹಾರಗಳ ವಿಭಾಗವಾದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ಐಎಸ್‌ಪಿಆರ್) ತನ್ನ ಹೇಳಿಕೆಯಲ್ಲಿ ತಿಳಿಸಿದೆ.