ನವದೆಹಲಿ: ಭಾರತೀಯ ನೌಕಾದಳ ರಷ್ಯಾ ಸೇನೆಯೊಂದಿಗೆ ಇಂಡೋ-ಫೆಸಿಫಿಕ್‌ನಲ್ಲಿಂದು ಸಮರಾಭ್ಯಾಸ ನಡೆಸಿವೆ. ಆ ಮೂಲಕ ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ಕೂಡ ಗಡಿಯಲ್ಲಿ ಪದೇ ಪದೆ ಪುಂಡಾಟ ಮೆರೆಯುತ್ತಿರುವ ಚೀನಾಗೆ ಪ್ರಬಲ ಸಂದೇಶ ರವಾನಿಸಿವೆ.
ರಷ್ಯಾದೊಂದಿಗೆ ಭಾರತೀಯ ನೌಕಾ ಪಡೆ ಇಂಡೋ-ಫೆಸಿಫಿಕ್‌ನಲ್ಲಿ ಸಮರಾಭ್ಯಾಸ ; ಚೀನಾಗೆ ಪ್ರಬಲ ಸಂದೇಶ ರವಾನೆ
ಇದೇ ಸೆಪ್ಟೆಂಬರ್ 26 ರಿಂದ 28ರ ವರೆಗೆ ಉತ್ತರ ಅರೇಬಿಯಾ ಸಮುದ್ರದಲ್ಲಿ ಜಪಾನ್ ನೌಕಾಪಡೆಯೊಂದಿಗೆ ಭಾರತೀಯ ನೌಕಾದಳ ಮೂರು ದಿನಗಳ ದ್ವಿಪಕ್ಷೀಯ ಕಡಲ ಸಮರಾಭ್ಯಾಸ ನಡೆಸಿದೆ. ಜಪಾನ್‌ನೊಂದಿಗೆ ಭಾರತೀಯ ಸೇನೆ ನಡೆಸುತ್ತಿರುವ 4ನೇ ನೌಕಾ ಸಮರಾಭ್ಯಾಸ ಇದಾಗಿದೆ
2020ರ ಸೆಪ್ಟೆಂಬರ್ 26 ರಿಂದ 28ರ ವರೆಗೆ ಉತ್ತರ ಅರೇಬಿಯಾ ಸಮುದ್ರದಲ್ಲಿ ಜಪಾನ್‌ನೊಂದಿಗೆ ಭಾರತೀಯ ನೌಕಾ ಮೂರು ದಿನಗಳ ದ್ವಿಪಕ್ಷೀಯ ಕಡಲ ಸಮರಾಭ್ಯಾಸ ನಡೆಸಿದೆ. ಜಪಾನ್‌ನೊಂದಿಗೆ ಭಾರತೀಯ ಸೇನೆ ನಡೆಸುತ್ತಿರುವ 4ನೇ ನೌಕಾ ಸಮರಾಭ್ಯಾಸ ಇದಾಗಿದೆ.
ಈ ಮೊದಲು 2018ರ ಅಕ್ಟೋಬರ್‌ನಲ್ಲಿ ವಿಶಾಖಪಟ್ಟಣಂ ಸಮೀಪದ ಸಮುದ್ರದಲ್ಲಿ ಜೆಐಎಂಇಎಕ್ಸ್ ಸಮರಾಭ್ಯಾಸ ನಡೆಸಿದ್ದವು. ಹಲವು ವರ್ಷಗಳಿಂದ ಭಾರತ-ಜಪಾನ್‌ನ ನಡುವೆ ಸಹಕಾರ, ವ್ಯಾಪ್ತಿ ಮತ್ತು ಸಂಕೀರ್ಣತೆ ವೃದ್ಧಿಸಿದೆ. ಇದೀಗ ಕಳೆದ ಮೂರು ದಿನಗಳಿಂದ ಅತ್ಯಾಧುನಿಕ ಮಟ್ಟದ ಕಾರ್ಯಚರಣೆ ಮತ್ತು ಸಮರಾಭ್ಯಾಸಗಳು ನಡೆಯುತ್ತಿವೆ. ಇದು ಜಪಾನ್ ನಡುವಿನ ಸಂಬಂಧ ಹಾಗೂ ರಕ್ಷಣಾ ಒಪ್ಪಂದಗಳಿಗೆ ಮತ್ತಷ್ಟು ಬಲ ತುಂಬಲಿದೆ. ಅಂತಾರಾಷ್ಟ್ರೀಯ ನಿಯಮಗಳೊಂದಿಗೆ ಭದ್ರತೆಗಾಗಿ ಉಭಯ ದೇಶಗಳಲ್ಲಿ ಮತ್ತಷ್ಟು ನಿಕಟವಾಗಿ ಕೆಲಸ ಮಾಡಲಿವೆ.