ಢಾಕಾ: ತಾಂತ್ರಿಕ ಸಮಸ್ಯೆಯಿಂದಾಗಿ ಒಡಿಶಾದ ಪ್ಯಾರಡಿಪ್ನ ಆಗ್ನೇಯ ದಿಕ್ಕಿನಲ್ಲಿ ತೊಂದರೆಗೊಳಗಾಗಿದ್ದ ಬಾಂಗ್ಲಾದೇಶದ ಮೀನುಗಾರಿಕಾ ಬೋಟ್ವೊಂದನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
19 ಬಾಂಗ್ಲಾದೇಶಿಗರನ್ನು ರಕ್ಷಿಸಿದ ಭಾರತೀಯ ಕೋಸ್ಟ್ ಗಾರ್ಡ್ - ಮೀನುಗಾರಿಕಾ ಬೋಟ್
ಬಾಂಗ್ಲಾದೇಶದ 'ರಾಣಾ' ಎಂಬ ಮೀನುಗಾರಿಕಾ ಬೋಟ್ ಮತ್ತು ಅದರಲ್ಲಿದ್ದ 19 ಸಿಬ್ಬಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ರಕ್ಷಿಸಿದ್ದು, ಬಾಂಗ್ಲಾದೇಶದ ಭಾರತೀಯ ರಾಯಭಾರ ಕಚೇರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.
ಭಾರತೀಯ ಕೋಸ್ಟ್ ಗಾರ್ಡ್
ಬಾಂಗ್ಲಾದೇಶದ 'ರಾಣಾ' ಎಂಬ ಮೀನುಗಾರಿಕಾ ಬೋಟ್ವೊಂದು ಕಳೆದ 10 ದಿನಗಳಿಂದ ಒಡಿಶಾದ ಪ್ಯಾರಡಿಪ್ನ ಆಗ್ನೇಯ ಭಾಗದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ತೊಂದರೆಗೊಳಗಾಗಿದ್ದು, ಇದರಲ್ಲಿದ್ದ 19 ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಭಾರತೀಯ ಕೋಸ್ಟ್ ಗಾರ್ಡ್, ಬೋಟ್ನಲ್ಲಿ ತೊಂದರೆಗೊಳಗಾಗಿದ್ದ 19 ಸಿಬ್ಬಂದಿಯನ್ನು ರಕ್ಷಿಸಿ, ಪ್ರಥಮ ಚಿಕಿತ್ಸೆ, ಆಹಾರ ಮತ್ತು ನೀರನ್ನು ಒದಗಿಸಿದ್ದು, ಬೋಟ್ ಅನ್ನು ಸಹ ರಕ್ಷಿಸಲಾಗಿದೆ ಎಂದು ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ.