ಕರ್ನಾಟಕ

karnataka

ETV Bharat / international

2023ಕ್ಕೆ ಭಾರತದಲ್ಲಿ ಜಿ-20 ಶೃಂಗಸಭೆ ಆಯೋಜನೆ - ಗ್ರೂಪ್ ಆಫ್ 20 ಶೃಂಗಸಭೆ

ಇಟಾಲಿಯನ್ ಮತ್ತು ಇಂಡೋನೇಷ್ಯಾ ಅಧ್ಯಕ್ಷತೆಯ ನಂತರ 2023 ರಲ್ಲಿ ಜಿ-20 ಶೃಂಗಸಭೆಯನ್ನು ಆಯೋಜಿಸಲು ಭಾರತ ಎದುರು ನೋಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಭಾರತವು 2022 ರ ಬದಲು 2023ರಲ್ಲಿ ಶೃಂಗಸಭೆಯನ್ನು ಆಯೋಜಿಸಲು ನಿರ್ಧರಿಸಿದೆ.

India to host G20 summit in 2023
2023 ಕ್ಕೆ ಭಾರತದಲ್ಲಿ ಜಿ 20 ಶೃಂಗಸಭೆ ಆಯೋಜನೆ

By

Published : Nov 23, 2020, 9:06 AM IST

ರಿಯಾದ್ (ಸೌದಿ ಅರೇಬಿಯಾ): 2023 ರಲ್ಲಿ ಜಿ20 ಶೃಂಗಸಭೆಯನ್ನು ಭಾರತವು ಆಯೋಜಿಸಲಿದೆ. ಈ ಹಿಂದೆ ನಿರ್ಧರಿಸಿದ್ದಕ್ಕಿಂತ ಒಂದು ವರ್ಷದ ನಂತರ ಶೃಂಗಸಭೆಯನ್ನು ಆಯೋಜಿಸಲಿದೆ ಎಂದು ಶೃಂಗಸಭೆ ನಾಯಕರು ಭಾನುವಾರ ಪ್ರಕಟಿಸಿದ್ದಾರೆ.

"ಯಶಸ್ವಿ ರಿಯಾದ್ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಮತ್ತು ಜಿ 20 ಪ್ರಕ್ರಿಯೆಗೆ ಅದರ ಕೊಡುಗೆಗಾಗಿ ನಾವು ಸೌದಿ ಅರೇಬಿಯಾಕ್ಕೆ ಧನ್ಯವಾದಗಳನ್ನ ತಿಳುಸುತ್ತೇವೆ. 2021 ರಲ್ಲಿ ಇಟಲಿಯಲ್ಲಿ, 2022 ರಲ್ಲಿ ಇಂಡೋನೇಷ್ಯಾ, 2023 ರಲ್ಲಿ ಭಾರತ ಮತ್ತು 2024 ರಲ್ಲಿ ಬ್ರೆಜಿಲ್​​ನಲ್ಲಿ ನಮ್ಮ ಮುಂದಿನ ಸಭೆಗಳನ್ನು ನಡೆಸಲು ನಿರ್ಧರಿಸಿದ್ದೇವೆ" ಎಂದು ಜಿ 20 ಶೃಂಗಸಭೆ ನಾಯಕರು ತಿಳಿಸಿದರು.

ಇಟಾಲಿಯನ್ ಮತ್ತು ಇಂಡೋನೇಷ್ಯಾ ಅಧ್ಯಕ್ಷತೆ ನಂತರ 2023ರಲ್ಲಿ ಜಿ 20 ಶೃಂಗಸಭೆಯನ್ನು ಆಯೋಜಿಸಲು ಭಾರತ ಎದುರು ನೋಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಭಾರತವು 2022 ರ ಬದಲು 2023 ರಲ್ಲಿ ಶೃಂಗಸಭೆಯನ್ನು ಆಯೋಜಿಸಲು ನಿರ್ಧರಿಸಿದೆ.

ABOUT THE AUTHOR

...view details