ಕರ್ನಾಟಕ

karnataka

RSS ವಿರುದ್ಧ ಮಾತನಾಡಿದ ಪಾಕ್‌ ಪ್ರಧಾನಿ ಇಮ್ರಾನ್​ ಖಾನ್​, ತಾಲಿಬಾನ್​ ವಿಚಾರಕ್ಕೆ ಗಪ್​ಚುಪ್​​

By

Published : Jul 16, 2021, 6:03 PM IST

'ಉಜ್ಭೇಕಿಸ್ತಾನದಲ್ಲಿ ಸವಾಲುಗಳು ಮತ್ತು ಅವಕಾಶಗಳು' ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುವ ಸಲುವಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್,​ ಕೇಂದ್ರ- ದಕ್ಷಿಣ ಏಷಿಯನ್ ಕಾನ್ಫರೆನ್ಸ್​ನಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಅವರನ್ನು ANI ಸುದ್ದಿಸಂಸ್ಥೆಯ ಪ್ರತಿನಿಧಿ ಮಾತಿಗೆಳೆದರು.

Imran Khan evades question on Taliban, blames 'RSS ideology' for stalled talks with India
ಆರ್​ಎಸ್​ಎಸ್​ ವಿರುದ್ಧ ಮಾತನಾಡಿದ ಇಮ್ರಾನ್​ ಖಾನ್​, ತಾಲಿಬಾನ್​ ವಿಚಾರಕ್ಕೆ ಗಪ್​ಚುಪ್​​

ತಾಷ್ಕೆಂಟ್​(ರಷ್ಯಾ):ಅಫ್ಘಾನಿಸ್ತಾನದಲ್ಲಿ ಸತತವಾಗಿ ದಾಳಿ ನಡೆಸುತ್ತಿರುವ ತಾಲಿಬಾನಿಗಳನ್ನು ಪಾಕಿಸ್ತಾನ ನಿಯಂತ್ರಿಸುತ್ತಿದೆ ಎಂಬ ಆರೋಪದ ಕುರಿತು ಎಎನ್​ಐ ಕೇಳಿದ ಪ್ರಶ್ನೆಗೆ ಉತ್ತರ ನೀಡದೆ ಪಾಕ್​ ಪ್ರಧಾನಿ ಇಮ್ರಾನ್ ಖಾನ್ ನುಣುಚಿಕೊಂಡಿದ್ದಾರೆ.

ರಷ್ಯಾದ ತಾಷ್ಕೆಂಟ್​ನಲ್ಲಿ ಸೆಂಟ್ರಲ್- ಸೌತ್ ಏಷಿಯನ್ ಕಾನ್ಫರೆನ್ಸ್​ನಲ್ಲಿ ಭಾಗವಹಿಸಿದ್ದ ಖಾನ್, ತಾಲಿಬಾನಿಗಳ ಮೇಲೆ ಪಾಕ್​ ನಿಯಂತ್ರಣ ವಿಚಾರಕ್ಕೆ ಉತ್ತರ ನೀಡದೇ ನುಣುಚಿಕೊಂಡಿದ್ದಾರೆ.

ಇದಕ್ಕೂ ಮೊದಲು ಎಎನ್​​ಐ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಇಮ್ರಾನ್ ಖಾನ್, 'ಎರಡೂ ದೇಶಗಳು ಶಾಂತಿಯಿಂದ ನೆರೆಹೊರೆಯವರಂತೆ ಬದುಕುತ್ತೇವೆ ಎಂಬ ವಿಶ್ವಾಸದೊಂದಿಗೆ ದೀರ್ಘಕಾಲದಿಂದ ಕಾಯುತ್ತಿದ್ದೇವೆ. ನಾನು ಭಾರತಕ್ಕೆ ಇಷ್ಟನ್ನು ಮಾತ್ರ ಹೇಳಬಹುದು. ಆದರೆ ಭಾರತ ಆರ್​ಎಸ್​ಎಸ್ ಸಿದ್ಧಾಂತದ ಹಾದಿಯಲ್ಲಿದ್ದು, ನಾವು ಏನು ಮಾಡಬಹುದು? ಎಂದು ಪ್ರಶ್ನಿಸಿದ್ದಾರೆ.

ಭಯೋತ್ಪಾದನೆ ಮತ್ತು ಮಾತುಕತೆ ಜೊತೆ ಜೊತೆಯಾಗಿ ಸಾಗಬಹುದೇ? ಎಂದು ಎಎನ್​ಐ ಕೇಳಿದ ಪ್ರಶ್ನೆ ಇಮ್ರಾನ್ ಖಾನ್ ಈ ರೀತಿಯಾಗಿ ಉತ್ತರ ನೀಡಿದ್ದಾರೆ. ಆ ನಂತರ ತಾಲಿಬಾನ್​​ ಅನ್ನು ಪಾಕಿಸ್ತಾನ ನಿಯಂತ್ರಿಸುತ್ತಿದೆ ಎಂಬ ಆರೋಪದ ಕುರಿತ ಪ್ರಶ್ನೆಗೆ ಉತ್ತರ ನೀಡದೇ ಜಾರಿಕೊಂಡರು.

ಇದನ್ನೂ ಓದಿ:ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಶೇ.53ರಷ್ಟು ನೀರು ಸಂಗ್ರಹ : ಪ್ರಸ್ತುತ ನೀರಿನ ಪ್ರಮಾಣದ ಕುರಿತ ಸಂಪೂರ್ಣ ಮಾಹಿತಿ

ಭಾರತದ ಪರವಾಗಿಯೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ತಾಷ್ಕೆಂಟ್​ನಲ್ಲಿದ್ದು, ಸೆಂಟ್ರಲ್- ಸೌತ್ ಏಷಿಯನ್ ಕಾನ್ಫರೆನ್ಸ್​ನಲ್ಲಿ ಪಾಲ್ಗೊಳ್ಳಲಿದ್ದಾರೆ.

ABOUT THE AUTHOR

...view details