ಕರ್ನಾಟಕ

karnataka

ETV Bharat / international

ಅತ್ಯಾಚಾರ ಹೆಚ್ಚಳಕ್ಕೆ ಮಹಿಳೆಯರ ತುಂಡುಡುಗೆಯೇ ಕಾರಣ; ಪಾಕ್​ ಪ್ರಧಾನಿ ಇಮ್ರಾನ್​ - ಅತ್ಯಾಚಾರ ಪ್ರಕರಣ ಹೆಚ್ಚಾಗಲು ಮಹಿಳೆಯರ ತುಂಡುಡುಗೆಯೇ ಕಾರಣ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​

ಇದೀಗ ಇಮ್ರಾನ್​ ಅವರ ಹೇಳಿಕೆಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯ ಜೊತೆಗೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಅನೇಕರು ತಮ್ಮದೆ ಶೈಲಿಯಲ್ಲಿ ಟ್ವೀಟ್​​ ಮಾಡಿ ಇಮ್ರಾನ್​ ಹೇಳಿಕೆಗಳನ್ನ ಖಂಡಿಸುತ್ತಿದ್ದಾರೆ.

Imran Khan
ಇಮ್ರಾನ್​ ಖಾನ್​

By

Published : Jun 21, 2021, 12:52 PM IST

ಇಸ್ಲಾಮಾಬಾದ್​: ದೇಶದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಲು ಮಹಿಳೆಯರು ಧರಿಸುವ ಉಡುಗೆಯೇ ಕಾರಣ ಎಂದು ಪುನರುಚ್ಚರಿಸಿರುವ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್​ ಖಾನ್​ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಎಚ್​ಬಿಒ ನ ಆಕ್ಸಿಯೊಸ್​ ಸಂದರ್ಶನದಲ್ಲಿ ಇಮ್ರಾನ್​ ಖಾನ್​​ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಮಹಿಳೆಯರು ತುಂಡುಡುಗೆಯನ್ನು ಧರಿಸಿದರೆ ಅದು ಪುರುಷರ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಇದು ಕೇವಲ ಸಾಮಾನ್ಯ ಜ್ಞಾನ ಎಂದು ಹೇಳಿಕೆ ನೀಡಿದ್ದಾರೆ.

ಇದೀಗ ಇಮ್ರಾನ್​ ಅವರ ಹೇಳಿಕೆಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯ ಜೊತೆಗೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಅನೇಕರು ತಮ್ಮದೆ ಶೈಲಿಯಲ್ಲಿ ಟ್ವೀಟ್​​ ಮಾಡಿ ಇಮ್ರಾನ್​ ಹೇಳಿಕೆಗಳನ್ನ ಖಂಡಿಸುತ್ತಿದ್ದಾರೆ.

ಈ ಬಗ್ಗೆ ದಕ್ಷಿಣ ಏಷ್ಯಾ ನ್ಯಾಯಶಾಸ್ತ್ರಜ್ಞರ ಅಂತರರಾಷ್ಟ್ರೀಯ ಆಯೋಗದ ಕಾನೂನು ಸಲಹೆಗಾರ್ತಿ ಆಗಿರುವ ರೀಮಾ ಓಮರ್​ ಟ್ವೀಟ್​ ಮಾಡಿದ್ದು, "ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಾರಣ ನೀಡುವಾಗ ಸಂತ್ರಸ್ತೆ ಅಥವಾ ಬಲಿಪಶುವನ್ನೇ ದೂಷಿಸುವ ಪಾಕ್​ ಪ್ರಧಾನಿ ಇಮ್ರಾನ್​ ನಡೆ ನಿರಾಶಾದಾಯಕವಾಗಿದೆ" ಎಂದಿದ್ದಾರೆ.

ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ತಮ್ಮ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತ ಪ್ರಶ್ನೆಗೆ ಇಮ್ರಾನ್​ ಖಾನ್​​ ಹೀಗೆ ಪ್ರತಿಕ್ರಿಯಿಸಿದ್ದರು. ಈ ಪ್ರತಿಕ್ರೆಯ ನಂತರ ವಿರೋಧ ಪಕ್ಷದ ನಾಯಕರು ಸೇರಿದಂತೆ ಪತ್ರಕರ್ತರು, ಜನರು ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಇಮ್ರಾನ್​ ಖಾನ್​ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ನೂರಾರು ಜನರು ಸಹಿ ಸಂಗ್ರಹಿಸಿದ್ದರು.

ಪಾಕಿಸ್ತಾನದಲ್ಲಿ ಅತ್ಯಾಚಾರ ಪ್ರಕರಣಗಳಲ್ಲಿ 0.3% ಅಪರಾಧಿಗಳಿಗಷ್ಟೆ ಶಿಕ್ಷೆ :

ಪ್ರತಿ 24 ಗಂಟೆಗೆ ದೇಶದಲ್ಲಿ ಕನಿಷ್ಠ 11 ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ ಎಂದು ಪಾಕಿಸ್ತಾನ ಬಿಡುಗಡೆ ಮಾಡಿದ ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಕಳೆದ ಆರು ವರ್ಷಗಳಲ್ಲಿ 22,000 ಪ್ರಕರಣಗಳು ವರದಿಯಾಗಿವೆ. ಆದಾಗ್ಯೂ, ಪಾಕಿಸ್ತಾನದಲ್ಲಿ ಅತ್ಯಾಚಾರ ಅಪರಾಧಿಗಳ ಶಿಕ್ಷೆಯ ಪ್ರಮಾಣವು ಶೇಕಡಾ 0.3 ರಷ್ಟಿದೆ.

ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ 2020 ರ ಅತ್ಯಾಚಾರ-ವಿರೋಧಿ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದರು. ಅಂತಹ ಪ್ರಕರಣಗಳಲ್ಲಿ ಕಾನೂನು ಕ್ರಮಗಳನ್ನು ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲು ಶಾಸನವು ಆದೇಶಿಸುತ್ತದೆ.

ABOUT THE AUTHOR

...view details