ಕಾಬೂಲ್(ಅಫ್ಘಾನಿಸ್ತಾನ): ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನದ ಮಹಿಳೆಯರ ಹಕ್ಕುಗಳನ್ನು ಗೌರವಿಸಬೇಕು ಎಂದು ಆಗ್ರಹಿಸಿ ಕಾಬೂಲ್‌ನ ರಾಷ್ಟ್ರಪತಿ ಭವನದ ಮುಂದೆ ಶುಕ್ರವಾರ ಪ್ರತಿಭಟನೆಗಳು ಭುಗಿಲೆದ್ದವು. ನಾವೂ ಹೊಸ ಸರ್ಕಾರದ ಭಾಗವಾಗಬೇಕು ಎಂದು ಮಹಿಳೆಯರು ಆಗ್ರಹಿಸಿದರು.
ಕಾಬೂಲ್‌ನ ರಾಷ್ಟ್ರಪತಿ ಭವನದ ಮುಂದೆ ಮಹಿಳೆಯರ ಪ್ರತಿಭಟನೆ ಅಫ್ಘಾನಿಸ್ತಾನವನ್ನು ತಮ್ಮ ತೆಕ್ಕೆಗೆ ಪಡೆದುಕೊಂಡಿರುವ ತಾಲಿಬಾನಿಗರು ಮಹಿಳೆಯರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಬೂಲ್‌ನ ರಾಷ್ಟ್ರಪತಿ ಭವನದ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಹೊಸದಾಗಿ ಆಯ್ಕೆಯಾಗುವ ತಾಲಿಬಾನ್ ಸರ್ಕಾರವು ಮಹಿಳಾ ಹಕ್ಕುಗಳನ್ನು ಗೌರವಿಸಬೇಕು ಎನ್ನುವ ಗಟ್ಟಿಧ್ವನಿ ಮೊಳಗಿಸಿದರು. ಹೊಸ ಸರ್ಕಾರದಲ್ಲಿ ಮಹಿಳೆಯರನ್ನು ಪಾಲುದಾರರನ್ನಾಗಿ ಮಾಡಲು ಈ ವೇಳೆ ಆಗ್ರಹಿಸಲಾಯಿತು.
ಕಾಬೂಲ್‌ನ ರಾಷ್ಟ್ರಪತಿ ಭವನದ ಮುಂದೆ ಮಹಿಳೆಯರ ಪ್ರತಿಭಟನೆ ಕೆಲವು ಮಹಿಳೆಯರು ಶುಕ್ರವಾರ ಅರಮನೆಯ ಮೊದಲ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. 'ಮಹಿಳೆಯರಿರುವ ವೀರರ ಕ್ಯಾಬಿನೆಟ್' (A heroic cabinet with the presence of women) ಎಂದು ಬರೆದಿರುವ ಭಿತ್ತಿ ಪತ್ರಗಳು ಈ ಸಂದರ್ಭದಲ್ಲಿ ಪ್ರದರ್ಶನಗೊಂಡವು.
ಕಾಬೂಲ್‌ನ ರಾಷ್ಟ್ರಪತಿ ಭವನದ ಮುಂದೆ ಮಹಿಳೆಯರ ಪ್ರತಿಭಟನೆ ಮಾನವ ಹಕ್ಕುಗಳ ರಕ್ಷಣೆ ಮತ್ತು ಹಿಂದಿನ ಕ್ರೂರ ಆಡಳಿತ ಬೇಡ ಎಂದು ಘೋಷಣೆ ಕೂಗಲಾಯಿತು. ಈ ಮೂಲಕ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಶಿಕ್ಷಣ ಮತ್ತು ಸಮಾನತೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವೂ ಕೂಡಾ ಈ ಪ್ರತಿಭಟನೆಯಲ್ಲಿ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:ಚೀನಾ ನಮ್ಮ ಅತ್ಯಂತ ಪ್ರಮುಖ ಪಾಲುದಾರ: ತಾಲಿಬಾನ್ ಹೀಗೆ ಹೇಳಿದ್ದೇಕೆ?