ಕರ್ನಾಟಕ

karnataka

ETV Bharat / international

ಮ್ಯಾನ್ಮಾರ್‌ ಸೇನೆಯಿಂದ ರಕ್ತಪಾತ: 12 ದೇಶಗಳ ರಕ್ಷಣಾ ಮುಖ್ಯಸ್ಥರಿಂದ ಖಂಡನೆ

ದೇಶವನ್ನು ಸೇನೆಯ ಕಂಬಂಧ ಬಾಹುಗಳಿಂದ ಬಿಡುಗಡೆಗೊಳಿಸಲು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರ ಮೇಲೆ ಮ್ಯಾನ್ಮಾರ್ ಮಿಲಿಟರಿ ನಡೆಸಿದ ಹಿಂಸಾಚಾರವನ್ನು ವಿಶ್ವದ 12 ದೇಶಗಳ ರಕ್ಷಣಾ ಮುಖ್ಯಸ್ಥರು ಭಾನುವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಖಂಡಿಸಿದ್ದಾರೆ.

ಮ್ಯಾನ್ಮಾರ್‌ ಪ್ರತಿಭಟನಾಕಾರರ ಮೇಲಿನ ಹಿಂಸಾಚಾರ
ಮ್ಯಾನ್ಮಾರ್‌ ಪ್ರತಿಭಟನಾಕಾರರ ಮೇಲಿನ ಹಿಂಸಾಚಾರ

By

Published : Mar 28, 2021, 5:58 PM IST

ನೈಪಿಥಾವ್: ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಮ್ಯಾನ್ಮಾರ್‌ ಪ್ರತಿಭಟನಾಕಾರರ ಮೇಲೆ ಅಲ್ಲಿನ ಮಿಲಿಟರಿ ನಡೆಸಿರುವ ರಕ್ತಪಾತವನ್ನು 12 ದೇಶಗಳ ರಕ್ಷಣಾ ಮುಖ್ಯಸ್ಥರು ಖಂಡಿಸಿದ್ದಾರೆ.

ಫೆಬ್ರವರಿಯಿಂದ ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಒಂದೇ ದಿನ ನೂರಾರು ಜನರು ಸಾವನ್ನಪ್ಪಿದ್ದರು. ಇದಾದ ಬಳಿಕ ಯುಎಸ್, ಯುಕೆ, ಜರ್ಮನಿ, ಇಟಲಿ, ಡೆನ್ಮಾರ್ಕ್, ಗ್ರೀಸ್, ನೆದರ್‌ಲ್ಯಾಂಡ್ಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳು ಈ ಹಿಂಸಾಚಾರಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿವೆ.

ಇದನ್ನೂ ಓದಿ: ಮ್ಯಾನ್ಮಾರ್: ಮಿಲಿಟರಿ ವಿರುದ್ಧದ ದಂಗೆಯಲ್ಲಿ 114 ನಾಗರಿಕರು ಸಾವು

ನವೆಂಬರ್ 8, 2020 ರಲ್ಲಿ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಅಧಿಕಾರಕ್ಕೆ ಬರಲು ನಕಲಿ ಮತಗಳನ್ನು ಹಾಕಿಸಿದೆ ಎಂದು ಸೇನೆ ಆರೋಪಿಸಿದೆ. ಹಾಗಾಗಿ ಫೆಬ್ರವರಿ 1 ರಂದು, ಮ್ಯಾನ್ಮಾರ್‌ನ ನಾಗರಿಕ ಸರ್ಕಾರವನ್ನು ಉರುಳಿಸಿ, ರಾಜ್ಯ ಕೌನ್ಸಿಲರ್ ಆಂಗ್ ಸಾನ್ ಸೂಕಿ ಸೇರಿದಂತೆ ಹಲವು ಮುಖಂಡರನ್ನು ಬಂಧಿಸಿ ಒಂದು ವರ್ಷದ ಅವಧಿಯ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಆದ್ರೆ ಸೇನೆಯು ಈ ಆರೋಪಕ್ಕೆ ಯಾವುದೇ ಪುರಾವೆ ಒದಗಿಸಿಲ್ಲ.

ಮ್ಯಾನ್ಮಾರ್​ನಲ್ಲಿ ಸೇನೆಯು ಪತ್ರಕರ್ತರ ಮೇಲೆ ದೌರ್ಜನ್ಯ ಎಸಗುತ್ತಿರುವುದರಿಂದ ಸಾವಿನ ಸಂಖ್ಯೆಯನ್ನು ಸರಿಯಾಗಿ ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ಮ್ಯಾನ್ಮಾರ್​ನ ಸುದ್ದಿ ಪೋರ್ಟಲ್‌ವೊಂದರ ವರದಿಯ ಪ್ರಕಾರ, ದೇಶದ 44 ಪಟ್ಟಣಗಳು ​​ಮತ್ತು ನಗರಗಳಲ್ಲಿ 114 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ.

ABOUT THE AUTHOR

...view details