ಮನಿಲಾ: ಫಿಲಿಪ್ಪೀನ್ಸ್ನಲ್ಲಿ 'ಮೊಲೇವ್' ಚಂಡಮಾರುತ ಅಬ್ಬರಿಸುತ್ತಿದ್ದು, ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ನಾಲ್ವರು ಕಾಣೆಯಾಗಿದ್ದು, 22 ಜನರು ಗಾಯಗೊಂಡಿದ್ದಾರೆ.
ಮೊದಲು ಮೊಲೇವ್ ಚಂಡಮಾರುತವು ಭಾನುವಾರ ಸಂಜೆ ಫಿಲಿಪ್ಪೀನ್ಸ್ನ ರಾಜಧಾನಿಯಾದ ಮನಿಲಾದ ದಕ್ಷಿಣ ಭಾಗದ ತಬಾಕೊ ನಗರಕ್ಕೆ ಅಪ್ಪಳಿಸಿತ್ತು. ಭಾನುವಾರದಿಂದ ಗುರುವಾರದ ವರೆಗೆ ಮೊಲೇವ್ ಚಂಡಮಾರುತವು 63 ಪ್ರದೇಶಳಲ್ಲಿ ಪ್ರವಾಹ ಹಾಗೂ 22 ಪ್ರದೇಶಗಳಲ್ಲಿ ಭೂಕುಸಿತವನ್ನುಂಟುಮಾಡಿದೆ.