ಕರ್ನಾಟಕ

karnataka

ETV Bharat / international

ಜಪಾನ್ ರಕ್ಕಸ ಪ್ರವಾಹ: ಸಾವಿನ ಸಂಖ್ಯೆ 50ಕ್ಕೆ ಏರಿಕೆ, 12 ಮಂದಿ ನಾಪತ್ತೆ! - ಜಪಾನ್‌ನ ವಿಪತ್ತು ನಿರ್ವಹಣಾ ಸಂಸ್ಥೆ

ಜಪಾನ್​ನಲ್ಲಿ ಪ್ರವಾಹ ಪರಿಸ್ಥಿತಿಯಿಂದ ಜನಜೀವನ ಹದಗೆಟ್ಟಿದೆ. ಈವರೆಗೆ 50 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿ ಹೆಚ್ಚು ಹಾನಿಗೊಳಗಾದ ನದಿ ತೀರದ ಪಟ್ಟಣಗಳಲ್ಲಿ ಸೇನಾ ಪಡೆಗಳು, ಪೊಲೀಸರು ಮತ್ತು ಇತರ ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

flood
flood

By

Published : Jul 7, 2020, 12:11 PM IST

ಟೋಕಿಯೊ (ಜಪಾನ್): ಇತ್ತೀಚಿನ ಪ್ರವಾಹದಿಂದ ಜಪಾನ್​ನಲ್ಲಿ ಮೃತಪಟ್ಟವರ ಸಂಖ್ಯೆ 50ಕ್ಕೆ ಏರಿದ್ದು, 12 ಜನ ಕಾಣೆಯಾಗಿದ್ದಾರೆ ಎಂದು ಜಪಾನ್‌ನ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.

ಜಪಾನ್ ಪ್ರವಾಹ

ಜಪಾನ್‌ನ ದಕ್ಷಿಣ ಪ್ರದೇಶವಾದ ಕ್ಯುಶುನಲ್ಲಿ ಶುಕ್ರವಾರ ತಡವಾಗಿ ಸುರಿದ ಮಳೆ ವ್ಯಾಪಕ ಪ್ರವಾಹಕ್ಕೆ ಕಾರಣವಾಗಿದೆ. ಮೃತಪಟ್ಟವರಲ್ಲಿ 49 ಮಂದಿ ಕುಮಾಮೊಟೊ ಪ್ರಾಂತ್ಯದ ನದಿಯ ಪಕ್ಕದ ಪಟ್ಟಣಗಳಿಗೆ ಸೇರಿದವರಾಗಿದ್ದಾರೆ. ಫುಕುಯೊಕಾ ಪ್ರಾಂತ್ಯದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.

ಜಪಾನ್ ಪ್ರವಾಹ

ಕುಮಾ ನದಿಯುದ್ದಕ್ಕೂ ಹೆಚ್ಚು ಹಾನಿಗೊಳಗಾದ ನದಿ ತೀರದ ಪಟ್ಟಣಗಳಲ್ಲಿ ಸೇನಾ ಪಡೆಗಳು, ಪೊಲೀಸರು ಮತ್ತು ಇತರ ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಜಪಾನ್ ಪ್ರವಾಹ

ಕುಯೋಕಾದ ಓಮುಟಾ ಜಿಲ್ಲೆಯಲ್ಲಿ, ನಿವಾಸಿಗಳನ್ನು ದೋಣಿಗಳಲ್ಲಿ ರಕ್ಷಣಾ ಪಡೆಗಳು ರಕ್ಷಿಸುತ್ತಿವೆ. ಕ್ಯುಶು ಪ್ರದೇಶದಾದ್ಯಂತ ಸುಮಾರು 3 ಮಿಲಿಯನ್ ನಿವಾಸಿಗಳನ್ನು ಸ್ಥಳಾಂತರಿಸಲು ಸೂಚಿಸಲಾಗಿದೆ.

ABOUT THE AUTHOR

...view details