ಬೀಜಿಂಗ್:ಕೋವಿಡ್-19 ವೈರಸ್ ಹುಟ್ಟಿಗೆ ಕಾರಣವಾಗಿ, ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಚೀನಾ ಕೊನೆಗೂ ವುಹಾನ್ ಲ್ಯಾಬ್ನ ಕೆಲವೇ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಕೊರೊನಾ ವೈರಸ್ ಸೃಷ್ಟಿಸಲಾಗಿದೆ ಎಂದು ಹೇಳಲಾದ ವುಹಾನ್ ಲ್ಯಾಬ್ ಚಿತ್ರಗಳನ್ನು ಚೀನಾ ಸರ್ಕಾರದ ವಾಹಿನಿ ಸಿಸಿಟಿವಿ ಬಿಡುಗಡೆ ಮಾಡಿದೆ.
ವುಹಾನ್ನ ಪಿ-4 ಲ್ಯಾಬ್ನ ಸಂಕ್ಷಿಪ್ತ ಮಾಹಿತಿಯನ್ನು ಮಾತ್ರ ಸಿಸಿಟಿವಿ ವಾಹಿನಿ ನೀಡಿದ್ದು, ದಪ್ಪ ಗಾಜಿನ ಆವರಣದ ಹೊರಗಿನಿಂದ ಸೆರೆ ಹಿಡಿಯಲಾದ ಕೆಲ ಚಿತ್ರಗಳು ಇವಾಗಿವೆ. ಆದರೂ ಲ್ಯಾಬ್ನಲ್ಲಿ ಯಾವೆಲ್ಲಾ ಚಟುವಟಿಕೆಗಳು ನಡೆಯುತ್ತಿವೆ ಎಂಬುದರ ಬಗ್ಗೆ ಮಾತ್ರ ಚೀನಾ ಸರ್ಕಾರ ಮೌನವಾಗಿದೆ. 2017ರಲ್ಲಿ ಈ ಲ್ಯಾಬ್ ಆರಂಭಗೊಂಡಿದ್ದು, ಅಂದಿನಿಂದಲೇ ಇಲ್ಲಿ ಅತಿ ಭಯಾನಕವಾದ ಕ್ಲಾಸ್-4 ವೈರಾಣುಗಳನ್ನು ತಯಾರಿಸಲಾಗುತ್ತಿದೆ ಎಂದು ಹೇಳಲಾಗಿದೆ.