ಬಿಹಾರ:ಕೊರೊನಾ ವೈರಸ್ ಹರಡಲು ಪಿತೂರಿ ನಡೆಸಿದ ಆರೋಪದಡಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಭಾರತದ ಚೀನಾ ರಾಯಭಾರಿ ಸನ್ ವಿಯ್ಡೋಂಗ್ ವಿರುದ್ಧ ಬಿಹಾರದ ಮುಜಾಫರ್ಪುರ ಕೋರ್ಟ್ನಲ್ಲಿ ದೂರು ದಾಖಲಾಗಿದೆ.
ಚೀನಾದ ಅಧ್ಯಕ್ಷ, ಚೀನಾ ರಾಯಭಾರಿ ವಿರುದ್ಧ ದೂರು ದಾಖಲು... ಯಾಕೆ ಗೊತ್ತೇ
ಕೊರೊನಾ ವೈರಸ್ ಹರಡಲು ಪಿತೂರಿ ನಡೆಸಿದ ಆರೋಪದಡಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಭಾರತದ ಚೀನಾ ರಾಯಭಾರಿಯನ್ನು ವಿಚಾರಣೆ ನಡೆಸುವಂತೆ ನ್ಯಾಯಾಲಯದಲ್ಲಿ ಬಿಹಾರದ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.
ಚೀನಾದ ಅಧ್ಯಕ್ಷ ಹಾಗೂ ಭಾರತದ ಚೀನಾ ರಾಯಭಾರಿ ವಿರುದ್ಧ ದೂರು ದಾಖಲು
ಏಪ್ರಿಲ್ 11 ರಂದು ಸಿಜೆಎಂ ನ್ಯಾಯಾಲಯದಲ್ಲಿ ಈ ಕೇಸ್ ವಿಚಾರಣೆಗೆ ನಡೆಯಲಿದೆ. ವಕೀಲರಾದ ಸುಧೀರ್ ಕುಮಾರ್ ಓಜಾ ಈ ಇಬ್ಬರ ಬಗ್ಗೆ ದೂರು ದಾಖಲಿಸಿದ್ದು , ದೂರಿನಲ್ಲಿ ಚೀನಾ ಅಧ್ಯಕ್ಷ ಹಾಗೂ ಭಾರತದ ಚೀನಾ ರಾಯಭಾರಿ ಕೊರೊನಾ ವೈರಸ್ ಹರಡುವ ಸಂಚು ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಭಾರತದಲ್ಲಿ 17 ವಿದೇಶಿ ಪ್ರಜೆಗಳು ಸೇರಿದಂತೆ ಸುಮಾರು 110 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ನಂತರ ಈ ದೂರು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.