ಇಸ್ಲಾಮಾಬಾದ್: 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದ ಭಾರತದ ನಿರ್ಧಾರವನ್ನು ಅದರ ಆಂತರಿಕ ವಿಷಯವೆಂದು ಹೇಳಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈಗ ತಮ್ಮ ಮಾತು ಬದಲಾಯಿಸಿದ್ದಾರೆ.
370 ವಿಧಿ ರದ್ದು.. RSSನ ನಾಜಿಗೆ, ಮೋದಿಯನ್ನು ಹಿಟ್ಲರ್ಗೆ ಹೋಲಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್.. - ಆರ್ಟಿಕಲ್ 370
ಭಾರತ ಕಾಶ್ಮೀರದ ಜನರನ್ನು ಬದಲಾಯಿಸುವ ಪ್ರಯತ್ನ ಮಾಡುತ್ತಿದೆ. ಜನಾಂಗೀಯ ಶುದ್ಧೀಕರಣದ ಮೂಲಕ ಕಾಶ್ಮೀರದ ಜನರನ್ನು ಬದಲಾಯಿಸುವ ಪ್ರಯತ್ನ ಮಾಡುತ್ತಿದೆ. ಪ್ರಶ್ನೆ ಇರುವುದು, ಮ್ಯೂನಿಚ್‌ನಲ್ಲಿ ಹಿಟ್ಲರ್ ಮಾಡಿದಂತೆ ಮಾಡಲಿದ್ದಾರೆ ಎಂಬುದನ್ನು ಜಗತ್ತು ನೋಡಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸರಣಿ ಟ್ವೀಟ್ ಮಾಡಿದ್ದಾರೆ.
ಭಾರತ ಕಾಶ್ಮೀರದ ಜನರನ್ನು ಬದಲಾಯಿಸುವ ಪ್ರಯತ್ನ ಮಾಡುತ್ತಿದೆ. ಜನಾಂಗೀಯ ಶುದ್ಧೀಕರಣದ ಮೂಲಕ ಕಾಶ್ಮೀರದ ಜನರನ್ನು ಬದಲಾಯಿಸುವ ಪ್ರಯತ್ನ ಮಾಡುತ್ತಿದೆ. ಪ್ರಶ್ನೆ ಇರುವುದು, ಮ್ಯೂನಿಚ್‌ನಲ್ಲಿ ಹಿಟ್ಲರ್ ಮಾಡಿದಂತೆ ಮಾಡಲಿದ್ದಾರೆ ಎಂಬುದನ್ನು ಜಗತ್ತು ನೋಡಲಿದೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಆದೇಶದ ಮೇರೆಗೆ ಅಧಿಕಾರ ನಡೆಸುತ್ತಿದ್ದಾರೆ ಎಂದು ನಾಜಿಗೆ ಹೋಲಿಸಿ ಇಮ್ರಾನ್ ಖಾನ್ ಟೀಕೆ ಮಾಡಿದ್ದಾರೆ. 'ನಾಜಿ ಆರ್ಯರ ಪ್ರಾಬಲ್ಯದಂತೆ ಹಿಂದೂ ಪ್ರಾಬಲ್ಯದ ಆರ್‌ಎಸ್‌ಎಸ್ ಸಿದ್ಧಾಂತವು ಹೆಚ್ಚು ದಿನ ನಿಲ್ಲುವುದಿಲ್ಲ. ಬದಲಾಗಿ ಅದು ಭಾರತದಲ್ಲಿ ಮುಸ್ಲಿಮರನ್ನು ನಿಗ್ರಹಿಸಲು ಮುಂದಾಗಲಿದೆ. ಅದು ಅಂತಿಮವಾಗಿ ಪಾಕಿಸ್ತಾನವನ್ನು ಗುರಿಯಾಗಿಸಿಕೊಳ್ಳುತ್ತದೆ. ಹಿಟ್ಲರ್ನ ಲೆಬೆನ್ಸ್‌ರಾಮ್‌ನಂತೆ ಹಿಂದೂ ಪ್ರಾಬಲ್ಯವಾದಿಗಳಿದ್ದಾರೆ ಎಂದು ವ್ಯಂಗ್ಯವಾಡಿ ಬರೆದುಕೊಂಡಿದ್ದಾರೆ.