ಕರ್ನಾಟಕ

karnataka

ETV Bharat / international

ಜಕಾರ್ತಾ ವಿಮಾನ ದುರಂತ: ಕಾಕ್​​​ಪಿಟ್​​​ ವಾಯ್ಸ್​ ರೆಕಾರ್ಡರ್​​ ಡೌನ್ಲೋಡ್​​​ ಯಶಸ್ವಿ - ಕಾಕ್​ಪಿಟ್ ವಾಯ್ಸ್​

ವಿಮಾನ ಪತನಕ್ಕೂ ಮುನ್ನ ನಡೆದ 2 ಗಂಟೆಗಳ ವಾಯ್ಸ್​ ರೆಕಾರ್ಡ್​ ಆಗಿರಲಿದ್ದು, 62 ಜನರ ಜಲಸಮಾಧಿಗೆ ಕಾರಣ ತಿಳಿಯಲು ಸಹಾಯವಾಗಲಿದೆ ಎಂದು ಸಮಿತಿಯ ಮುಖ್ಯಸ್ಥ ಸೊರ್ಜಾಂಟೊ ಟ್ಜಾಜೊನೊ ಹೇಳಿದ್ದಾರೆ.

cockpit-voice-recorder
ವಾಯ್ಸ್​ ರೆಕಾರ್ಡರ್

By

Published : Apr 13, 2021, 7:44 PM IST

ಜಕಾರ್ತಾ:ಕಳೆದ ವರ್ಷ ಜನವರಿ 9ರಂದು ನಾಪತ್ತೆಯಾಗಿ ಪೆಸಿಫಿಕ್ ಸಮುದ್ರದಲ್ಲಿ ಪತನಗೊಂಡಿತ್ತು. ಇದೀಗ ವಿಮಾನದ ಕಾಕ್​​​ಪಿಟ್​ ವಾಯ್ಸ್​​ ರೆಕಾರ್ಡರ್​ ಅನ್ನು ಯಶಸ್ವಿಯಾಗಿ ಡೌನ್​ಲೋಡ್ ಮಾಡಿಕೊಂಡಿದೆ.

ಸಮುದ್ರದಲ್ಲಿ ದೊರೆತಿದ್ದ ಬ್ಲಾಕ್ ಬಾಕ್ಸ್ ಅನ್ನು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿಗೆ ನೀಡಲಾಗಿತ್ತು, ಇದೀಗ ಕಾಕ್​ಪಿಟ್ ವಾಯ್ಸ್​ ಅನ್ನು ಯಶಸ್ವಿಯಾಗಿ ಡೌನ್​​ಲೋಡ್ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.

ವಿಮಾನ ಪತನಕ್ಕೂ ಮುನ್ನ ನಡೆದ 2 ಗಂಟೆಗಳ ವಾಯ್ಸ್​ ರೆಕಾರ್ಡ್​ ಆಗಿರಲಿದ್ದು, 62 ಜನರ ಜಲಸಮಾಧಿಗೆ ಕಾರಣ ತಿಳಿಯಲು ಸಹಾಯವಾಗಲಿದೆ ಎಂದು ಸಮಿತಿಯ ಮುಖ್ಯಸ್ಥ ಸೊರ್ಜಾಂಟೊ ಟ್ಜಾಜೊನೊ ಹೇಳಿದ್ದಾರೆ.

ಕಾಕ್​​​​ಪಿಟ್​​ ರೆಕಾರ್ಡರ್​​​ನಿಂದ ಎಲ್ಲಾ ಚಾನೆಲ್​​​ಗಳನ್ನು ಡೌನ್​​ಲೋಡ್ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಅದರಲ್ಲಿ 4ನೇ ಚಾನೆಲ್​ ಡೌನ್​ಲೋಡ್​ ಮಾಡಿಕೊಳ್ಳುವಲ್ಲಿ ಅಡ್ಡಿಯುಂಟಾಗಿದೆ ಎಂದಿದ್ದಾರೆ.

ಇನ್ನು ಡೌನ್​ಲೋಡ್ ಮಾಡಿಕೊಳ್ಳಲಾದ ದತ್ತಾಂಶಗಳನ್ನು ತನಿಖೆಗಾಗಿ ಬಳಸಿಕೊಳ್ಳಲಿದ್ದು, ವಿಮಾನ ಪತನಕ್ಕೆ ಕಾರಣವಾದ ಅಂಶ ಹೊರಬರಲಿದ ಎಂದಿದ್ದಾರೆ.

ಜಕಾರ್ತಾದಿಂದ ಪಶ್ಚಿಮ ಕಾಲಿಮಂತನ್ ಪ್ರಾಂತ್ಯದ ಪೊಂಟಿಯಾನಕ್‌ ಕಡೆಗೆ ಹೊರಟಿದ್ದ 62 ಪ್ರಯಾಣಿಕರನ್ನು ಹೊತ್ತ ಶ್ರೀವಿಜಯ ಏರ್ ಬೋಯಿಂಗ್ 737-500 ವಿಮಾನ ಸಮುದ್ರಕ್ಕೆ ಅಪ್ಪಳಿಸಿತ್ತು.

ABOUT THE AUTHOR

...view details