ನವದೆಹಲಿ :ಜಗತ್ತಿನ 48 ದೇಶಗಳಿಂದ ಕೋಟ್ಯಂತರ ಮಂದಿ ಚೀನಾ ಕೋವಿಡ್‌ಗೆ ಅಭಿವೃದ್ಧಿಪಡಿಸಿರುವ ಸಿನೆೋವ್ಯಾಕ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಆದರೆ, ಈ ಲಸಿಕೆ ಒಮಿಕ್ರಾನ್‌ಗೆ ಯಾವುದೇ ರೀತಿಯಲ್ಲೂ ಪರಿಣಾಮಕಾರಿಯಲ್ಲ ಎಂದು ಅಧ್ಯಯನವೊಂದು ಹೇಳಿದೆ.
ನೇಚರ್ ಮೆಡಿಸಿನ್‌ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಈ ಮಾಹಿತಿ ತಿಳಿದು ಬಂದಿದೆ. ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಸಿನೋವ್ಯಾಕ್ ಎರಡು ಡೋಸ್‌ಗಳನ್ನು ಪಡೆದಿದ್ದ 101 ಮಂದಿಯ ರಕ್ತದ ಸೀರಮ್ ಪಡೆದು ಸಂಶೋಧನೆ ನಡೆಸಿದಾಗ ದೇಹದಲ್ಲಿ ಒಮಿಕ್ರಾನ್ ಸೋಂಕು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಉತ್ಪಾದಿಸುವುದಿಲ್ಲ ಎಂಬುದನ್ನು ತೋರಿಸಿದೆ.
ಒಮಿಕ್ರಾನ್ ವಿರುದ್ಧ ಫಿಜರ್-ಬಯೋಟೆಕ್‌ನ ಎಂಆರ್‌ಎನ್‌ಎ ಬೂಸ್ಟರ್ ಲಸಿಕೆ ಹಾಗೂ ಸಿನೋವ್ಯಾಕ್ ಎರಡರ ಫಲಿತಾಂಶಗಳು ಒಂದೇಯಾಗಿದೆ ಎಂದು ಎಂದು ಯೇಲ್ ವಿಶ್ವವಿದ್ಯಾಲಯ ಹಾಗೂ ಡೊಮಿನಿಕನ್ ರಿಪಬ್ಲಿಕ್ ತಿಳಿಸಿದೆ. ಮತ್ತೊಂದು ಅಧ್ಯಯನದಲ್ಲಿ mRNA ಲಸಿಕೆ ಸೀಮಿತ ರಕ್ಷಣೆ ನೀಡಲಿದೆ ಎಂದು ಹೇಳಿದೆ.
SARS-Cov-2 ವೈರಸ್‌ನ ಹಿಂದಿನ ತಳಿಗಳ ಸೋಂಕಿಗೆ ಒಳಗಾದ ವ್ಯಕ್ತಿಗಳು ಒಮಿಕ್ರಾನ್ ವಿರುದ್ಧ ಕಡಿಮೆ ರಕ್ಷಣೆಯನ್ನು ನೀಡಿದೆ ಎಂದು ವಾಲ್ಡೆಮರ್ ವಾನ್ ಜೆಡ್‌ಟ್ವಿಟ್ಜ್ ಇಮ್ಯುನೊಬಯಾಲಜಿ ಪ್ರಾಧ್ಯಾಪಕ ಹಾಗೂ ಹಿರಿಯ ಲೇಖಕ ಅಕಿಕೊ ಇವಾಸಾಕಿ ಹೇಳಿದ್ದಾರೆ.
ಜಾಹೀರಾತು:ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ