ಕರ್ನಾಟಕ

karnataka

ETV Bharat / international

ಎಂಥಾ ವಿಚಿತ್ರ.. ತುಂಡರಿಸಿದ ನಾಗರ ಹಾವಿನ ತಲೆ ಕಚ್ಚಿ ವ್ಯಕ್ತಿ ಸಾವು.. - ಹಾವು

ಚೀನಾದ ಹಲವು ಪ್ರದೇಶಗಳಲ್ಲಿ ವಿಷಕಾರಿ ನಾಗರ ಹಾವಿನ ಮಾಂಸದಿಂದ ತಯಾರಿಸಿದ ಸೂಪ್ ತುಂಬಾ ಫೇಮಸ್​. ಹೆಚ್ಚಿನ ಜನ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ..

ಹಾವಿನ ತಲೆ ಕಚ್ಚಿ ವ್ಯಕ್ತಿ ಸಾವು..
ಹಾವಿನ ತಲೆ ಕಚ್ಚಿ ವ್ಯಕ್ತಿ ಸಾವು..

By

Published : Aug 25, 2021, 6:41 PM IST

Updated : Aug 25, 2021, 7:07 PM IST

ಚೀನಾ :ಇಲ್ಲಿನ ಫೋಶಾನ್​ನಲ್ಲಿ ಬಾಣಸಿಗನೊಬ್ಬ ನಾಗರಹಾವನ್ನು ಕತ್ತರಿಸಿ ಸೂಪ್ ಮಾಡುತ್ತಿದ್ದನು. ಈ ವೇಳೆ ಹಾವಿನ ತಲೆಯನ್ನು (ಜೀವವಿದ್ದ ತಲೆ)ಎಸೆಯಲು ಹೋಗಿದ್ದು, ಆಗ ಅದು ಕಚ್ಚಿ ಬಾಣಸಿಗ ಮೃತಪಟ್ಟಿದ್ದಾನೆ. ಹಾವಿನ ತಲೆ ಕಚ್ಚಿದ ತಕ್ಷಣ ಬಾಣಸಿಗ ನೆಲಕ್ಕುರುಳಿದ್ದಾನೆ. ತಕ್ಷಣ ಹೋಟೆಲ್​ನ ಇತರೆ ಸಿಬ್ಬಂದಿ, ವೈದ್ಯರನ್ನು ಕರೆಸಿದರು. ಆದರೆ, ಡಾಕ್ಟರ್ ಬರುವ ವೇಳೆಗೆ ಆತ ಕೊನೆಯುಸಿರೆಳೆದಿದ್ದ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಹಕನೊಬ್ಬ, ನನ್ನ ಹೆಂಡತಿಯ ಹುಟ್ಟುಹಬ್ಬದ ಪ್ರಯುಕ್ತ ಹೋಟೆಲ್​ನಲ್ಲಿ ಊಟ ಮಾಡುತ್ತಿದ್ದೆವು. ಇದ್ದಕ್ಕಿದ್ದಂತೆ ಗಲಾಟೆ ಶುರುವಾಯಿತು. ನಾವು ಏನಾಯಿತು ಎಂದು ನೋಡಲು ಹೋದಾಗ, ಕತ್ತರಿಸಿದ ನಾಗರಹಾವಿನ ತಲೆ ಕಚ್ಚಿ ಆತ ಮೃತಪಟ್ಟಿದ್ದ. ಆ ತಲೆ ಹೇಗೆ ಕಚ್ಚಿತು, ಎಂದು ನಮಗೂ ಆಶ್ಚರ್ಯವಾಗುತ್ತಿದೆ ಎಂದರು.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದೊಂದು ವಿಚಿತ್ರ ಪ್ರಕರಣ. ಕೂಲಂಕಷವಾಗಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಚೀನಾದ ಹಲವು ಪ್ರದೇಶಗಳಲ್ಲಿ ವಿಷಕಾರಿ ನಾಗರ ಹಾವಿನ ಮಾಂಸದಿಂದ ತಯಾರಿಸಿದ ಸೂಪ್ ತುಂಬಾ ಫೇಮಸ್​. ಹೆಚ್ಚಿನ ಜನ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ.

Last Updated : Aug 25, 2021, 7:07 PM IST

ABOUT THE AUTHOR

...view details