ಕರ್ನಾಟಕ

karnataka

ETV Bharat / international

ಆಂಗ್ ಸಾನ್ ಸೂ ಕಿ ಆರೋಗ್ಯ ಸ್ಥಿರ: ಮ್ಯಾನ್ಮಾರ್ ಸೇನೆ - ಮ್ಯಾನ್ಮಾರ್ ಬಿಕ್ಕಟ್ಟು

ಮ್ಯಾನ್ಮಾರ್​ನಲ್ಲಿ ಸೇನೆಯಿಂದ ಬಂಧಿತರಾಗಿರುವ ಮಾಜಿ ಕೌನ್ಸಿಲರ್ ಆಂಗ್ ಸಾನ್ ಸೂ ಕಿ ಆರೋಗ್ಯ ಸ್ಥಿರವಾಗಿದೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮ್ಯಾನ್ಮಾರ್ ಸೇನೆ
ಮ್ಯಾನ್ಮಾರ್ ಸೇನೆ

By

Published : Feb 6, 2021, 11:58 AM IST

ನಾಯ್ಪಿಟಾವ್ (ಮ್ಯಾನ್ಮಾರ್): ದೇಶದಲ್ಲಿ ಸೇನೆಯಿಂದ ಬಂಧಿತರಾಗಿರುವ ಮಾಜಿ ಕೌನ್ಸಿಲರ್ ಆಂಗ್ ಸಾನ್ ಸೂ ಕಿ ಆರೋಗ್ಯ ಸ್ಥಿರವಾಗಿದೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾನೂನು ಮತ್ತು ಆಮದು-ರಫ್ತನ್ನು ಉಲ್ಲಂಘಿಸಿದ್ದಕ್ಕಾಗಿ ಸೂ ಕಿ ಮತ್ತು ಮಾಜಿ ಅಧ್ಯಕ್ಷ ಯು ವಿನ್ ಮೈಂಟ್ ಅವರನ್ನು ಬಂಧನದಲ್ಲಿಡಲಾಗಿದೆ ಎಂದು ಸೇನೆಯ ಅಧಿಕಾರಿ ತಿಳಿಸಿದ್ದಾರೆ.

ಎನ್‌ಎಲ್‌ಡಿ ಪಕ್ಷದ ನಾಯಕ ಯು ವಿನ್ ಹೆಟೈನ್ ಅವರನ್ನು ಯಾವ ಆರೋಪದಡಿ ಬಂಧಿಸಲಾಗಿದೆ ಅನ್ನೋದನ್ನು ಪರಿಶೀಲಿಸುತ್ತಿದ್ದೇವೆ ಎಂದು ಪಕ್ಷದ ಮಾಹಿತಿ ಸಮಿತಿ ಸದಸ್ಯ ಕೈ ಟೋ ಆನ್ಲೈನ್ ಪೋಸ್ಟ್​​ನಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಮುಖ ನಾಯಕರನ್ನು ವಶಪಡಿಸಿಕೊಂಡ ನಂತರ ದೇಶದಲ್ಲಿ ಒಂದು ವರ್ಷದ ಅವಧಿಗೆ ಸೇನೆ ತುರ್ತು ಪರಿಸ್ಥಿತಿ ಘೋಷಿಸಿದೆ. ಅಧಿಕಾರವನ್ನು ರಕ್ಷಣಾ ಸೇವೆಗಳ ಕಮಾಂಡರ್-ಇನ್-ಚೀಫ್ ಸೆನ್-ಜನರಲ್ ಮಿನ್ ಆಂಗ್ ಹ್ಲೇಂಗ್​ಗೆ ಹಸ್ತಾಂತರಿಸಲಾಗಿದೆ.

ABOUT THE AUTHOR

...view details