ಕಾಬೂಲ್:ಅಫ್ಘಾನಿಸ್ತಾನದ ಖ್ಯಾತ ಪಾಪ್ ತಾರೆ, ಮಾನವ-ಮಹಿಳಾ ಹಕ್ಕುಗಳ ಕಾರ್ಯಕರ್ತೆ ಆರ್ಯಾನಾ ಸಯೀದ್ ಕಾಬೂಲ್ ನಗರವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ಬಳಿಕ ಕಳೆದ ಗುರುವಾರ ದೇಶವನ್ನು ತೊರೆದಿದ್ದಾರೆ. ಈ ವಿಚಾರವನ್ನ ಆರ್ಯಾನಾ ಸಯೀದ್ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.
'ಮಾತೃಭೂಮಿ ತೊರೆಯುವ ಕೊನೆಯ ಸೈನಿಕಳು ನಾನು'
ಈ ಬಗ್ಗೆ ಟ್ವೀಟ್ ಮಾಡಿರುವ ಗಾಯಕಿ, "ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತೃಭೂಮಿಯನ್ನು ತೊರೆಯುವ ಕೊನೆಯ ಸೈನಿಕಳು ತಾನು ಎಂದು ಹೇಳಿದ್ದೆ. ಅದು ನಿಜವಾಗಿದೆ. ನನ್ನ ಸುಂದರ ಜನರು ಶಾಂತಿಯುತ ಜೀವನವನ್ನು ಪ್ರಾರಂಭಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಹೇಳಿ ದೇಶದಿಂದ ಪಲಾಯನವಾಗುತ್ತಿರುವ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಫ್ಘಾನ್ ಮಹಿಳೆ
"ನಾನು ಚೆನ್ನಾಗಿದ್ದೇನೆ ಮತ್ತು ಜೀವಂತವಾಗಿದ್ದೇನೆ. ಒಂದೆರಡು ಮರೆಯಲಾಗದ ರಾತ್ರಿಗಳ ನಂತರ ನಾನು ಕತಾರ್ಗೆ ಬಂದಿದ್ದೇನೆ. ಇದೀಗ ಇಸ್ತಾಂಬುಲ್‌ಗೆ ಮರಳಲು ಕಾಯುತ್ತಿದ್ದೇನೆ" ಎಂದು ಆರ್ಯಾನಾ ಸಯೀದ್ ತಮ್ಮ 1.3 ಮಿಲಿಯನ್ ಇನ್‌ಸ್ಟಾಗ್ರಾಮ್ ಅನುಯಾಯಿಗಳಿಗೆ ತಿಳಿಸಿದ್ದಾರೆ. ಕಾಬೂಲ್ನಿಂದ ಯುಎಸ್ ಕಾರ್ಗೋ ಜೆಟ್ ಮೂಲಕ ಕತಾರ್ಗೆ ಹೋಗಿರುವುದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.